ಮುಂಬೈ : (ಪಿಟಿಐ) : ಬಾಲಿವುಡ್ ನಟ ಸಲ್ಮಾನ ಖಾನ್ ಅವರಿಗೆ ಪನ್ವೇಲ್ನಲ್ಲಿನ ಅವರ ಫಾರ್ಮ್ ಹೌಸ್ನಲ್ಲಿ ಶನಿವಾರ ತಡರಾತ್ರಿ ಹಾವು ಕಚ್ಚಿದ್ದು, ನವಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭಾನುವಾರ ಮನೆಗೆ ಮರಳಿದ್ದಾರೆ.
ಸಲ್ಮಾನ ಖಾನ್ ಅವರಿಗೆ ವಿಷ ರಹಿತ ಹಾವು ಕಚ್ಚಿದ್ದು, ಅವರು ಆರೋಗ್ಯದಿಂದಿದ್ದಾರೆ ಎಂದು ಸಲ್ಮಾನ್ ಕುಟುಂಬಕ್ಕೆ ಆಪ್ತರಾಗಿರುವ ನಟಿ ಬೀನಾ ಕಾಕ್ ಹೇಳಿದ್ದಾರೆ.
ಸಲ್ಮಾನ ಖಾನ್ ಅವರು ಫಾರ್ಮ್ ಹೌಸ್ ಗೆ ಮರಳಿದ್ದಾರೆ, ಅಲ್ಲಿ ಅವರು ಸೋಮವಾರ ತಮ್ಮ 56ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Leave a Comment