ಕುಮಟಾ : ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೈದ್ಧಗೆ ಲಾರಿ ಡಿಕ್ಕಿಯಾದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗುವ ಮಾರ್ಗ ಮದ್ಯೆ ಮೃತಪಟ್ಟ ಘಟನೆ ಕುಮಟಾ ತಾಲೂಕಿನ ಮಿರ್ಜಾನ ಬಳಿ ಚುತುಷ್ಟಥದಲ್ಲಿ ಸಂಭವಿಸಿದೆ.
ಕುಮಟಾ ತಾಲೂಕಿನ ಮಿರ್ಜಾನ ಕೋಟೆ ರಸ್ತೆ ನಿವಾಸಿ ದುಮಗಿ ಲಾರೆನ್ಸ್ ಗೊನ್ಸಾಲ್ವಿಸ್ (70)ಮೃತ ಪಾದಚಾರಿ. ಈಕೆ ಮಿರ್ಜಾನನದಲ್ಲಿ ಚತುಷ್ಟಥದ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಲಾರಿಯ ಚಾಲಕ ಮಹಾರಾಷ್ಟçದ ಯಲವಾಡಿಯ ಕೃಷ್ಣ ದಡಸ್ (39) ಅತಿವೇಗ ಹಾಗೂ ನಿಷ್ಕಾಳಯಿಂದ ಚಲಾಯಿಸುತ್ತ, ಹೆದ್ದಾರಿಗೆ ಅಡ್ಡ ಬಂದ ಆಕಳನ್ನು ತಪ್ಪಿಸಲು ಹೋಗಿ ಪಾದಚಾರಿ ವೃದ್ಧೆಗೆ ಡಿಕ್ಕಿಪಡಿಸಿದ್ದಾನೆ ಎನ್ನಲಾಗಿದೆ.
ಅವಘಾತದಲ್ಲಿ ದುಮಗಿ ಗೊನ್ಸಾಲ್ಟಿಸ್ ಹೆದ್ದಾರಿಯಲ್ಲ ಬಿದ್ದು ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಹೆಗಡೆ ಕ್ರಾಸ್ ಬಳಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಪಿ.ಎಸ್.ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment