2ಬಾರಿ ಸಮೀಪದಲ್ಲೇ ಹಾದು ಹೋದ ಉಪಗ್ರಹ
ಬೀಚಿಂಗ್ : ಅಮೆರಿಕಾದ ಉದ್ಯಮಿ ಎಲಾನ ಮಸ್ಕ್ ಒಡೆತನದಸ್ಪೇಸ್ ಎಕ್ಸ್ನಕಂಪನಿಯ ಉಪಗ್ರಹಗಳು ಚೀನಾದ ಬಾಹ್ಯಾಕಾಶ ಸಂಸ್ಥೆಯ ಪಕ್ಕದಲ್ಲೇ ಹಾದು ಹೋಗಿದ್ದು ಡಿಕ್ಕಿ ಸಂಭವಿಸುವ ಭೀತಿ ಎದುರಾಗಿತ್ತು ಎಂದು ಚೀನಾ ಆರೋಪಿಸಿದೆ.

ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಯೋಜನೆಯ ಭಾಗವಾಗಿ ಹಾರಿಬಿಟ್ಟಿರುವ ಉಪಗ್ರಹಗಳು ಕಳೆದ ಜುಲೈ ಹಾಗೂ ಅಕ್ಟೋಬರ್ನಲ್ಲಿ ಚೀನಾದ ಬಾಹ್ಯಾಕಾಶ ಕೇಂದ್ರದ ಬಳಿ ಹಾದು ಹೋಗಿವೆ.
ಚೀನಾದ ಬಾಹ್ಯಾಕಾಶ ಯಾತ್ರಿಗಳು ಅಗತ್ಯ ಕ್ರಮದ ಮೂಲಕ ಅವಘಡತಪ್ಪಿಸಿದರು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರಝಾವೋ ಲಿಜಿಯಾನ್ ಹೇಳಿದ್ದಾರೆ. ಅಲ್ಲದೇ ಈ ಸಂಬAಧ ಔಟರ್ ಸ್ಪೇಸ್ ಒಪ್ಪಂದದ ನಿಯಮವನ್ನು ಮಸ್ಕ್ ಉಲ್ಲಂಘಿಸಿದ್ದಾರೆ ಎಂದು ಡಿ.2 ರಂದೇ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂದಿದ್ದಾರೆ.
Leave a Comment