ನವದೆಹಲಿ : ದೇಶದಲ್ಲಿ ಒಮಿಕ್ರೋನ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ, ಒಂದೇ ದಿನ ಎರಡು ಕೋವಿಡ್ ಲಿಸಿಕೆ ಮತ್ತು ಒಂದು ಕೋವಿಡ್ ಗುಳಿಗೆಯನ್ನು ತುರ್ತು ಬಳಕೆಗೆ ಅವಕಾಶ ಮಾಡಿಕೊಡಲು ಶಫಾರಸು ನೀಡಿದೆ.
ಇದನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿದರೆ ಈ ಮೂರು ಔಷಧಗಳು ಬಳಕೆಗೆ ಶೀಘ್ರವೇ ಲಭ್ಯವಾಗಲಿದೆ. ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞೆ ತಂಡವು ಸೀರಂ ಇನ್ಸ÷್ಟ ಟ್ಯೂಟ್ನ ಕೋವೋ ವ್ಯಾಕ್ಸ್, ಬಯಲಾಜಿ ಕಲ್-ಇ ಲ್ಯಾಬ್ ನ ಕೋರ್ಬೆವ್ಯಾಕ್ ಮತ್ತು ಅಮೆರಿಕದ ಮೋಲ್ನು ಪಿರಾವಾರ್ಗೆ ಅನುಮತಿ ನೀಡುವಂತೆ ಶಿಫಾ ರಸು ಮಾಡಿದೆ.
ಮೊದಲ ಗಿಳಿಗೆ : ಮೋಲ್ನುಪಿರಾವಿರೆ ಗುಳಿಗೆಯನ್ನು ವಯಸ್ಕ ಕೋವಿಡ್ ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಶೇ.93 ಕ್ಕೆ ಕುಸಿದಿದ್ದರೆ ಅಥವಾ ಸೋಂಕಿತ ಆಸ್ಪತ್ರೆಗೆ ದಾಖಲಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ ಮಾತ್ರ ಮಾತ್ರೆಯನ್ನು ಬಳಿಕ ಮಾಡಬಹುದು 18 ವರ್ಷಕ್ಕಿಂತ ಕಡಿಮೆ ವಯೋಮಾನದ ರೋಗಿಗಳ ಮೇಲೆ ಗುಳಿಗೆ ಪ್ರಯೋಗ ಮಾಡಬಾರದು ಎಂದು ಕಂಪನಿ ತಿಳಿಸಿದೆ. ಡಿಸಿಜಿಐ ಅನುಮೋದನೆ ಬಳಿಕ ಗುಳಿಗೆಯು ಬಳಿಕ ಅರ್ಹತೆ ಪಡೆಯಲಿದೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಭಾರತದ ಬಳಿಯಿದೆ 12 ಶಸ್ತಾçಸ್ತç
ದೇಶದಲ್ಲಿ ಕೊರೋನಾ ನಿಯಂತಣದ ನಿಟ್ಟಿನಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತೆಡರು ಲಸಿಕೆಗಳು ಮತ್ತು ಔಷಧಕ್ಕೆ ನಿಯಂತ್ರಿತ ತುರ್ತು ಬಳಕೆಗೆ ಅವಕಾಶ ನೀಡಿದೆ. ತನ್ಮೂಲಕ ಭಾರತದದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಒಟ್ಟಾರೆ 8 ಲಸಿಕೆಗಳು ಮತ್ತು 4ಚಿಕಿತ್ಸಕ ಮದ್ದುಗಳು ಲಭ್ಯವಿವೆ.
ಅಸ್ಟಾçಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್, ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ದಿಪಡಿಸಿದ ಕೋವ್ಯಾಕ್ಸಿನ್, ರಷ್ಯಾದಸ್ಟು ಟ್ನಿಕ್-ವಿ ಭಾರತದ್ದೇ ಝೈಡಸ್ ಕ್ಯಾಡಿಲಾ, ಅಮೆರಿಕದ ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಕೋವೋವ್ಯಕ್ಸ್, ಹೈದರಾಬಾದ್ನ ಕೋರ್ಬೆವ್ಯಾಕ್ಸ್ ಸೇರಿ ಒಟ್ಟಾರೆ 8 ಲಸಿಕೆಗಳು ಲಭ್ಯವಿದೆ. ಇದಲ್ಲದೆ ಅಮೆರಿಕಾದ ಮರ್ಕ್ಸ್ ಕಂಪನಿ ಅಭಿವೃದ್ಧಿಪಡಿಸಿದ ಮೊಲ್ನಪಿರಾವಿರ್ ಮಾತ್ರೆ, ಟೊಸಿ ಲಿಜುಮ್ಯಾಬ್ ಡಿಆರ್ಡಿಒ ಸಹಯೋಗದಲ್ಲಿ ಡಾ. ರೆಡ್ಡೀಸ್ ಲ್ಯಾಬೋರೇಡರಿ ಅಭಿವೃದ್ದಿಪಡಿಸಿದ 2 -ಡಿಯೋಕ್ಸಿ – ಡಿ-ಗ್ಲೋಕೋಸ್ ಮತ್ತು ರಿಜೆನ್ – ಕೋವ್ – 2 ಆ್ಯಂಟಿಬಾಡಿ ಎಂಬ ಮಾತ್ರೆಗಳು ಕೊರೋನಾ ವಿರುದ್ಧದ ಮಾತ್ರೆಗಳಾಗಿವೆ.
Leave a Comment