ಕಾರವಾರ : ಭಟ್ಕಳ ತಾಲೂಕಿನಲ್ಲಿ 2021- 22 ನೇ ಸಾಲಿನಿಂದ ಅಲ್ಪಸಂಖ್ಯಾತರ ಬಾಲಕಿಯರ ವಸತಿನಿಲಯವನ್ನು ಪ್ರಾರಂಭಿಸಲಾಗಿದ್ದು, ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನವಾಗಿದ್ದು, ಪಿಯುಸಿ, ಪದವಿ ಅಥವಾ ಇತರೆ ಕೋರ್ಸ್ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಮಿಂ, ಕ್ರಿಶ್ಚಿಯನ್, ಜೈನ್, ಭೌದ್ಧ, ಪಾರ್ಸಿ, ಸಿಖ್ ವಿದ್ಯಾರ್ಥಿನಿಯರು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಭೇರಿ ಕಾರವಾರ ತಾಲೂಕಾ ವಿಸ್ತಾರಣಾಧಿಕಾರಿಗಳ ಕಛೇರಿ ಭಟ್ಕಳ ಹಾಗೂ ಎಲ್ಲಾ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರವಾರ ಹಾಗೂ ತಾಲೂಕಾ ವಿಸ್ತರಣಾಧಿಕಾರಿಗಳ ಕಚೇರಿ ಭಟ್ಕಳಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರವೀಣಕುಮಾರ ಪ್ರಕಟಣಣೆಯಲ್ಲಿ ತಿಳಿಸಿದ್ದಾರೆ.
Leave a Comment