ಹುಬ್ಬಳ್ಳಿ : ಪಿಎಂ ಕಿಸಾನ ಸಮ್ಮಾನ ನಿಧಿಯ ಹತ್ತನೇ ಕಂತಿನ ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ.
ಆದರೆ. ಧಾರವಾಡ ಜಿಲ್ಲೆಯ ಬಹುತೇಕ ರೈತರ ಖಾತೆಗೆ ಹಣ ಜಮೆಯಾಗಿಲ್ಲ ಎಂದು ರೈತರಾದ ಕಲ್ಲಪ್ಪ ಸೈಬಣ್ಣವರ ಹೇಳಿದ್ದು, ಜಿಲ್ಲಾಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕುಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ಖಾತೆಗೆ ಹಣ ಬಂದಿಲ್ಲ. ಖಾತೆಯನ್ನು ಪರಶೀಲನೆ ಮಾಡಿದಾಗ ಕರೆಕ್ಷನ್ ಪೆಂಡಿಗ್ ಸ್ಟಾಪ್ ಎಟ್ ಸೇಟ್ ಎಂದು ತೋರಿಸುತ್ತದೆ.
ಅಧಿಕಾರಿಗಳನ್ನು ಕೇಳಿದಾಗ ಅವರು ಕೆವೈಸಿ ನೆಪ ಹೇಳುತ್ತಿದ್ದಾರೆ. ಆದರೆ ಕೆವೈಸಿ ಸಮಸ್ಯೆ ಇಲ್ಲದವರ ಖಾತೆಗೆ ಹಣ ಜಮಾ ಆಗಿಲ್ಲ. ಇದರಿಂದ ನೂರಾರು ರೈತರು ಮುಂದಿನ ಕಂತಿನ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ನನಗೆ 9 ನೇ ಕಂತಿನ ಹಣ ಬಂದಿಲ್ಲ. ಈಗ 10ನೇ ಕಂತು ಬಿಡುಗಡೆಯಾಗಿದೆ. ಎರಡು ಕಂತಿನ ಹಣ ಬರದೆ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.
Leave a Comment