ಬೆಂಗಳೂರು : ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ನೀಡಲು ಕೆಂದ್ರ ಸರ್ಕಾರ ಪರಿಚಯಿಸಿರುವ ಇ-ರುಪಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ.
ಡಿಜಿಟಲ್ ವಹಿವಾಟು ಹೆಚ್ಚಳ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಇ-ರುಪಿ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರ ಇ-ಆಡಳಿತ ಇಲಾಖೆಯ ನ್ಯಾಷನಲ್ ಪೇಮೆಂಟ್ ಕಾರ್ಪೋರೆಷನ್ ಆಫ್ ಇಂಡಿಯಾ, ಎಸ್ಬಿಐ ಜೊತೆಗೆ ಇ-ರುಪಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿವೇತನಕ್ಕೆ ಅಳವಡಿಕೆ ಮಾಡುತ್ತಿದೆ.
ಈ ಮೂಲಕ ವಿದ್ಯಾರ್ಥಿಗಳು ತಮಗೆ ಲಭಿಸಿದ ವಿದ್ಯಾರ್ಥಿ ವೇತನವನ್ನು ಕಾಲೇಜಿನಲ್ಲಿಶುಲ್ಕ ಪಾವತಿಸಬೇಕಾಗಿದ್ದಲ್ಲಿ ಶುಲ್ಕವನ್ನು ಇ-ರುಪಿ ಮೂಲಕವೇ ಪಾವತಿಸಬೇಕಾಗಿದ್ದಲ್ಲಿ ಹಾಗೂ ಹಣದ ಬದಲಿಗೆ ಇ-ವೋಚರ್ ಕೋಡ್ಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಲಿದೆ. ಈ ಕೋಡ್ ಬಳಕೆ ಮಾಡಿಕೊಂಡು ಕೆಲವು ನಿಗದಿತ ಕಾಲೇಜುಗಳಿಗೆ ಶುಲ್ಕ ಪಾವತಿ ಮಾಡಬಹುದಾಗಿದೆ.
Leave a Comment