ಹೊನ್ನಾವರ : ತಾಲೂಕಿನ ಇಡಗುಂಜಿ ಕುಳಮನೆಯಲ್ಲಿಈರ್ವರು ಯುವತಿಯರು ವಿಷ ಸೇವಿಸಿ ಆತ್ಮಹತ್ಯೆಗೆಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಗದೆ ಮೃತಪಟ್ಟ ಘಟನೆ ನಡೆದಿದೆ.
ಮೇಘಶ್ರೀ ನಾಯ್ಕ (22) ಮತ್ತು ಭಾಗ್ಯಶ್ರೀ ನಾಯ್ಕ (22)ಅವಳಿ – ಜವಳಿ ಅಕ್ಕ – ತಂಗಿಯರು ಮೃತಪಟ್ಟವರು. ಸೋಮವಾರದಂದು ಇವರು ವಿಷ ಸೇವಿಸಿದ್ದರು. ನಂತರ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಚೆ ಮೃತಪಟ್ಟಿದ್ದಾರೆ.
ತಂದೆ – ತಾಯಿ ಈರ್ವರು ಕೂಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿಯ ಕೌಟುಂಬಿಕ ಜಗಳದಿಂದ ಬೇಸತ್ತು ಈ ಯತ್ನಕ್ಕೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment