ಚಿಕ್ಕಮಗಳೂರು : ಸತತ 22 ವರ್ಷದ ಬಳಿಕ ತಾಯಿ ಮಡಿಲನ್ನು ಮಗಳು ಸೇರಿದ ಮನ ಮಿಡಿಯುವ ಘಟನೆ ಮೂಡಿಗೆರೆ ತಾಲ್ಲೂಕಿನ ಮುದ್ರೆ ಮನೆ ಗ್ರಾಮದಲ್ಲಿ ನಡೆದಿದೆ.
ಅಂಜಲಿ 22 ವರ್ಷ ಬಳಿಕ ತಾಯಿಯನ್ನು ಭೇಟಿಯಾದ ಮಗಳು, 9 ವರ್ಷ ಅಂಜಲಿ ನಾಪತ್ತೆಯಾಗಿದ್ದರು. ನಂತರ ಅವರು ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು.
ಕೇರಳದ ನೆಲ್ಲಮಣಿಯಲ್ಲೇ ಸಾಜಿಯೊಂದಿಗೆ ಅಂಜಲಿ ವಿವಾಹವಾಗಿ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅಂಜಲಿಗೆ ತಾಯಿಯ ನೆನಪು ಬಹಳ ಕಾಡಿದೆ. ಇದರಿಂದಾಗಿ ಕಳೆದ 3 ವರ್ಷದಿಂದ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಮಂಗಳೂರಿನ ಫಿಶ್ ಮೋಣು, ಮುಸ್ತಾಫರ ಬಳಿ ಅಂಜಲಿ ಹಾಗೂ ಪತಿ ಸಾಜಿ ಹೇಳಿಕೊಂಡಿದ್ದರು.
ಮೂಡಿಗೆರೆ ಸುತ್ತಮುತ್ತ ಅಂಜಲಿ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಮೂಡಿಗೆರೆಯ ಮುದ್ರೆ ಮನೆಯಲ್ಲಿ ಅಂಜಲಿ ತಾಯಿ ಪತ್ತೆಯಾಗಿದ್ದಾರೆ. ಅಂಜಲಿ ತಾಯಿಯನ್ನು ಹುಡುಕುತ್ತಾ ಮೂಡಿಗೆರೆಯ ಮುದ್ರೆ ಮನೆಗೆ ಹೋಗಿದ್ದಾರೆ.
ಈ ವೇಳೆ ಅವರ ತಾಯಿ ಚೈತ್ರ ಅಲ್ಲಿಯೇ ಕೆಲಸ ಮಾಡುತ್ತಿರುವ ವಿಷಯ ತಿಳಿದಿದೆ. ತಾಯಿ ಬರುತ್ತರವುದನ್ನು ನೋಡಿದ ತಕ್ಷಣ ಅಂಜಲಿ ಓಡಿ ಹೋಗಿ ತಾಯಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟು ಯೋಗಕ್ಷೇಮ ವಿಚಾರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Leave a Comment