
ಯಲ್ಲಾಪುರ: ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮಾನ್ಯ ಸಭೆ ಹಾಗೂ ಮಾಸಿಕ ಕೆಡಿಪಿ ಸಭೆಯು ತಾಲೂಕ ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕ ಆರೋಗ್ಯಾಧಿಕಾರಿ ಡಾ. ನರೇಂದ್ರ ಪ್ರಪ್ರಥಮವಾಗಿ ಎಲ್ಲ ಇಲಾಖೆಯವರು ಕೋವಿಡ್ ಮೂರನೇ ಅಲೆಯನ್ನು ತಡೆಯಲು ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕು. ಮೂರನೇ ಅಲೆ ಎದರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೂ ನಿಷ್ಕಾಳ್ಜಿತನ ತೋರದೆ, ಸರ್ಕಾರಿ ಆಸ್ಪತ್ರೆಗೆ ಬಂದು ಸರಿಯಾದ ಉಪಚಾರ ಪಡೆಯಬೇಕು ಎಂದರು.
ಪಶು ಇಲಾಖೆಯ ವೈದ್ಯಾಧಿಕಾರಿ ಸುಬ್ರಾಯ ಭಟ್ಟ ಮಾತನಾಡಿ, ಡಿ.20 ರಿಂದ 45 ದಿನಗಳ ಕಾಲ ತಾಲೂಕಿನ ಸುಮಾರು 30 ಸಾವಿರ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆಯನ್ನು ಹಾಕುವ ಕಾರ್ಯ ಪ್ರಗತಿಯಲ್ಲಿದ್ದು, 25 ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ. ಪಶು ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತಿದ್ದು, ನೇಮಕಾತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಲಾಗಿದೆ. ಇದೇ ತಿಂಗಳಿನಲ್ಲಿ 2 ಜಾನುವಾರು ಪ್ರದರ್ಶನ ಮೇಳವನ್ನು ಹಮ್ಮಿಕೊಳ್ಳಾಗಿದ್ದು, ಕರಡೊಳ್ಳಿಯಲ್ಲಿ ಹಾಗೂ ಮಲವಳ್ಳಿಯಲ್ಲಿ ನಡೆಸಲು ಯೋಜಿಸಲಾಗಿದೆ. ಎಂದರು.
ಬಿಇಓ ಎನ್.ಆರ್. ಹೆಗಡೆ ತಾಲೂಕಿನಲ್ಲಿ ಶಿಕ್ಷಕರ ಕೊರತೆಯ ಕುರಿತು ಮಾಹಿತಿ ನೀಡಿದರು. ಈಗಾಗಲೇ 128 ಹುದ್ದೆಗಳು ಖಾಲಿ ಇದ್ದು, ಪ್ರಸಕ್ತ ವರ್ಷದ ವರ್ಗಾವಣೆಯ ನಂತರ ಮತ್ತೆ 56 ಹುದ್ದೆಗಳು ಖಾಲಿಯಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ, ವರ್ಗಾವಣೆಗೊಂಡ ಶಿಕ್ಷಕರನ್ನು ಮಾರ್ಚ ನಂತರ ತೆರಳುವಂತೆ ಸೂಚನೆ ನೀಡಲು ಸಚಿವರಲ್ಲಿ ಮನವಿ ಸಲ್ಲಿಸಲಾಗಿದೆ. ಅತಿಥಿ ಶಿಕ್ಷಕರನ್ನು ನೀಮಿಸಲು ಅನುಮತಿ ದೊರೆತಿದ್ದು, ಸ್ಥಳೀಯವಾಗಿ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡುವ ಹಕ್ಕನ್ನು ಎಸ್.ಡಿ.ಎಮ್.ಸಿ.ಗೆ ನೀಡಲಾಗಿದೆಎಂದರು.
ಲೋಕೋಪಯೋಗಿ ಇಲಾಖೆಯಿಂದ ಬಹುತೇಕ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಸರ್ಕಾರದ ಗ್ರಾಮಕ್ಕೊಂದು ಸೇತುವೆ ಎಂಬ ಕಾರ್ಯಕ್ರಮದಡಿ ತಾಲೂಕಿನಲ್ಲಿ 91 ಕಾಲುಸಂಕಗಳನ್ನು 11 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಅಂತೆಯೇ ಯಲ್ಲಾಪುರದಲ್ಲಿ ನೂತನ ಐ.ಬಿ. ಕಟ್ಟಡ ಮಂಜೂರಾಗಿದ್ದು, ಈಗಿರುವ ಐ.ಬಿ. ಪಕ್ಕಡದಲ್ಲಿಯೇ 5 ರೂಮ್ ಹಾಗೂ ಸಭಾಂಗಣವನ್ನೊಳಗೊಂಡ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು. ನೆರೆ ಪರಿಹಾರ ಯೋಜನೆಯಡಿಯಲ್ಲಿ ರಸ್ತೆ ದುರಸ್ಥಿಗೆ 20 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಪ್ರಮುಖವಾಗಿ ಕೈಗಾ ರಸ್ತೆಯನ್ನು 1.5 ಕೋಟಿ ವೆಚ್ಚದಲ್ಲಿ ರಿಪೇರಿ ಹಾಗೂ ಉಮ್ಮಚಗಿ-ಕಾತೂರು ರಸ್ತೆ ನಿರ್ಮಾಣಕ್ಕೆಂದು 2 ಕೋಟಿಯನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಪ್ರತಿ ಇಲಾಖೆಗಳ ಮುಖ್ಯ ಅಧಿಕಾರಿಗಳು ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಾಗಿ ತಮ್ಮ ಇಲಾಖೆಗಳ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು. ಆದರೆ ಕೆಲವು ಅಧಿಕಾರಿಗಳು ಸಭೆಗೆ ಇತರೆ ಅಧಿಕಾರಿಗಳನ್ನು ಸಭೆಗೆ ಕಳಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಇಲಾಖೆಯ ಬರಲಾಗದ ಸ್ಥಿತಿ – ಇದ್ದಲ್ಲಿ ಸಭೆಯ ಪ್ರಮುಖರಿಗೆ ಮೊದಲೆ ತಿಳಿಸಬೇಕು ಎಂದು ತಾಲೂಕ ಪಂಚಾಯತ ಆಡಳಿತಾಧಿಕಾರಿ ನಟರಾಜ್ ಹೇಳಿದರು.ಸಭೆಯಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ತಾಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment