ಬ್ಯಾಟರಿ ಚಾಲಿತ ಮೋಟಾರುಗಳು ಬಂದಿರುವುದರಿoದ ಪೇಟ್ರೋಲ್ – ಡೀಸೆಲ್ ವಾಹನಗಳಿಗೆ ಇನ್ನು ಉಳಿಗಾಲವಿಲ್ಲ. ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನು ಮರು ನೋಂದಣೆ ಮಾಡುವಿದಿಲ್ಲ ಎಂದು ದೆಹಲಿ ಸರ್ಕಾರ ಪ್ರಕಟಿಸಿದೆ.
ಅದರಂತೆ 1 ಲಕ್ಷ ವಾಹನಗಳು ರಸ್ತೆಯ ಇಳಿಯುವಂತಿಲ್ಲ. ಇವುಗಳು ರಸ್ತೆಗೆ ಬರಬೇಕು ಎಂದರೆ 4-5 ಲಕ್ಷ ರೂ ಬೇಕು. ಅದೇರೀತಿ ದ್ವಿಚಕ್ರವಾಹನಗಳನ್ನು ಬದಲಿಸಬೇಕು ಎಂದರೆ 35 ಸಾವಿರ ರೂ. ಬೇಕು ಇಷ್ಟು ಹಣ ನೀಡುವುದಕ್ಕೆ ಆಗುವುದಿಲ್ಲ ಎಂದರೆ ಅವುಗಳನ್ನು ದೆಹಲಿಯಲ್ಲಿ ಬಳಸುವಂತಿಲ್ಲ. 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನಗಳಿಗೂ ಇದೇ ಗತಿ ದೆಹಲಿಯಲ್ಲೇ ಒಟ್ಟು 43 ಲಕ್ಷ ವಾಹನಗಳಿವೆ.
ಇವುಗಳಲ್ಲಿ 32 ಲಕ್ಷ ದ್ವಿಚಕ್ರವಾಹನಗಳು. ಇವುಗಳಲ್ಲಿಪರಿವರ್ತಿಸಬೇಕು. ಇಲ್ಲವೆ ಬೇರೆ ನಗರಗಳಿಗೂ ರವಾನಿಸಬೇಕು. ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡಿ ಬ್ಯಾಟರಿ ಚಾಲಿತ ವಾಹನಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಮೋಟಾರುವಾಹನಗಳು ಮಾರಾಟವಾಗುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಒಟ್ಟು 300 ದಶಲಕ್ಷ
ಮೋಟಾರು ವಾಹನಗಳು ಭಾರತದಲ್ಲಿ ಬಳಕೆಯಲ್ಲಿವೆ. ಶೇಕಡ 60 ರಷ್ಟು ಜನ ಸ್ವಂತ ವಾಹನಗಳನ್ನು ಬಳಸುತ್ತದ್ದಾರೆ. 2020 ರಲ್ಲೇ 17 ದಶಲಕ್ಷ ದ್ವಿವಿಚಕ್ರ ವಾಹನಗಳು ಮಾರಾಟವಾಗಿವೆ. ಇದರಿಂದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚು. 2018 ರಲ್ಲಿ 160 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಮಹಾರಾಷ್ಟçದಲ್ಲಿ 30 ದಶಲಕ್ಷ, ಉತ್ತರಪ್ರದೇಶ ಮತ್ತು ತಮಿಳನಾಡಿನಲ್ಲಿ 26 ದಶಲಕ್ಷ, ಗುಜರಾತ್‌ನಲ್ಲಿ 22 ದಶಲಕ್ಷ ಕರ್ನಾಟಕದಲ್ಲಿ 18 ದಶಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳಿಂದ ಪರಿಸರ ಮಾಲಿನ್ಯ ಹೆಚ್ಚು ಎಂದು ವೈಜ್ಞಾನಿಕವಾಗಿ ಸಾಬೀತಾಗಿರುವುದಿಂದ ಎಲ್ಲ ಕಡೆ ಈಗ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಕೈಬಿಟ್ಟು ಬ್ಯಾಟರಿ ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿದೆ.
ದೆಹಲಿಯಲ್ಲಿ ಅತಿ ಹೆಚ್ಚು ಪರಿಸರ ಮಾಲಿನ್ಯ ಕಂಡು ಬಂದಿರುವುದರಿAದ ಅಲ್ಲಿ ಮೊದಲು ಬ್ಯಾಟರಿ ಚಾಲಿತ ವಾಹನಗಳಿಗೆ ಮಾತ್ರ ಅವಕಾಶ ನೀಡುವ ನೀತಿಯನ್ನು ಜಾರಿಗೆ ತರಲಾಗಿದೆ. ಬಸ್ ಮತ್ತು ಟ್ರಕ್‌ಗಳಿಗೆ ಸಿಎನ್‌ಜಿ ಕಡ್ಡಾಯವಾಗಿದೆ. ಉಳಿದ ವಾಹನಗಳಿಗೆ ಬ್ಯಾಟರಿ ಚಾಲಿತ ಎಂದು ನಿಯಮ ಮಾಡಲಾಗಿದೆ.
ಇದೇ ನಿಯಮ ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ಬರಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಆಧರಿತ ವಾಹನಗಳ ಉತ್ಪಾದನೆ ಇಳಿಮುಖಗೊಳ್ಳಲಿದೆ. ಬ್ಯಾಟರಿ ಚಾಲಿತ ವಾಹನಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈಗ ದ್ವಿಚಕ್ರವಾಹನಗಳು ಹೆಚ್ಚಿನ ಸಂಖ್ಯೆಯ ಬ್ಯಾಟರಿಚಾಲಿತವಾಗಿವೆ. ಇವುಗಳನ್ನು ತಯಾರಿಸುವ ಕಂಪನಿಗಳೂ ತಲೆ ಎತ್ತಿವೆ. ಹೀಗಾಗಿ ಹೊಸದಾಗಿ ದ್ವಿಚಕ್ರವಾಹನ ಖರೀದಿ ಮಾಡುವವರು ಬ್ಯಾಟರಿ ಚಾಲಿತ ವಾಹನಕ್ಕೆ ಹೋಗುತ್ತಿದ್ದಾರೆ. ಕಾರುಗಳು ಮತ್ತು ಆಟೋರಿಕ್ಷ ತಯಾರಿಕೆ ಬ್ಯಾಟರಿ ಚಾಲಿತವಾಗುತ್ತಿದ್ದರೂ ಇವುಗಳ ಮೂಲಬೆಲೆ ಹೆಚ್ಚಾಗಿರುವುದರಿಂದ ಖರೀದಿ ಉತ್ತೇಜನಕಾರಿಯಲ್ಲ ಆದರೆ ಮುಂದಿನ ದಿನಗಳಲ್ಲಿ ಇದನ್ನು ಖರೀದಿಸುವುದು ಅನಿವಾರ್ಯವಾಗಲಿದೆ.
ಇವುಗಳಿಗೆ 10 ವರ್ಷದ ವಿಮೆ ಸವಲತ್ತು ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಪರವರ್ತಿಸುವ ಕಿಟ್‌ಗಳನ್ನು ಹಲವು ಕಂಪನಿಗಳು ತಯಾರಿಸಿವೆ. ಇದರಿಂದ ವಾಹನಗಳ ಪರಿವರ್ತನೆ ಸುಲಭವಾಗಿದೆ. ದೆಹಲಿಯಲ್ಲಿ ಎಲ್ಲ ವಾಹನ ಸಿಎನ್‌ಜಿ ಮತ್ತು ಬ್ಯಾಟರಿಚಾಲಿತ ಮಾಡಲು ಸರ್ಕಾರ ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದೆ.
ಪೆಟ್ರೋಲ್ ಮತ್ತು ಡೀಸೇಲ್ ದರ ಅಧಿಕಗೊಂಡಿರುವುದರಿAದ ಬ್ಯಾಟರಿ ಚಾಲಿತ ವಾಹನಗಳತ್ತ ಜನರ ಗಮನ ಹರಿದಿರುವುದು ಸಹಜ. ಅಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಜಗತ್ತಿನಲ್ಲೆ ಕಡಿಮೆಯಾಗುವುದರಿಂದ ಪರ್ಯಾಯ ಇಂಧನವನ್ನು ಕಂಡುಕೊಳ್ಳುವುದು ಅಗತ್ಯ. ಅದರಲ್ಲಿಬ್ಯಾಟರಿ ಚಾಲಿತ ವಾಹನ ಸದ್ಯಕ್ಕೆ ಬದಲಿಯಾಗಿ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಸಂಶೋಧನೆ ನಡೆದಮೇಲೆ ಬೇರೆ ಇಂಧನ ಕಂಡು ಬರುಬಹುದು.
Leave a Comment