ನವದೆಹಲಿ : ತಮಿಳನಾಡು ರಾಜ್ಯಾದ್ಯಂತದಲ್ಲಿರುವ ಹೊಸ 11 ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹಾಗೂ ಚೆನ್ನೆöÊಯಲ್ಲಿನ ಕೇಂದ್ರೀಯ ತಮಿಳು ಶಾಸ್ತಿçÃಯ ಭಾಷಾ ಕೇಂದ್ರದ ಕ್ಯಾಂಪಸ್ ಗೆ ಬರುವ ಬುಧುವಾರ ವಿಡಿಯೋ ಕಾನ್ಬರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.

ಈ ಹೊಸ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ 4000 ಕೋಟಿ ರೂ. ತಗಲಲಿದ್ದುಅದರಲ್ಲಿ ಕೇಂದ್ರ ಸರ್ಕಾರ 2,145 ಕೋಟಿ ರೂ. ಭರಿಸುತ್ತಿದೆ. ಉಳಿದ ಹಣವನ್ನು ತಮಿಳನಾಡು ಸರ್ಕಾರ ನೀಡುತ್ತಿದೆ ಎಂದು ಪ್ರಧಾನಿಯವರ ಕಾರ್ಯಾಲಯ ತಿಳಿಸಿದೆ. ಅಂದು ಸಂಜೆ 4 ಗಂಟೆ ಸಮಯದಲ್ಲಿ ವಿಡಿಯೋ ಕಾನ್ಬರೆನ್ಸಿಂಗ್ ಮೂಲಕ ಈ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ವಿರುಧ್ನಗರ ನಮಕ್ಕಲ್ ನೀಲಗಿರಿ ತಿರುಪುರ, ತಿರುವಲ್ಲೂರು ನಾಗಪಟ್ಟಿಣಂ, ದಿಂಡಿಗಲ್ ಕಲ್ಲಕುರಿಚಿ ಆರಿಯಾಲುರ್, ರಾಮನಾಥಪುರಂ ಹಾಗೂ ಕೃಷ್ಣಗಿರಿ ಮೊದಲಾದೆಡೆ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ.
ದೇಶದ ಎಲ್ಲಾ ಭಾಗಗಳಲ್ಲೂ ಕೈಗೆಡಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮೂಲಭೂತ ಸವಲತ್ತು ಒದಗಿಸುವ ಉದ್ದೇಶದಿಂದ ಈ ಕಾಲೇಜುಗಳನ್ನು ನಿರ್ಮಿಸಲಾಗುತ್ತದೆ. ನೂತನ ಕಾಲೇಜುಗಳಿಂದಾಗಿ ವೈದ್ಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 1450 ರಷ್ಟು ಹೆಚ್ಚಳವಾಗಲಿದೆ.
ಇದೇ ವೇಳೆ ತಮಿಳು ಭಾಷಾ ಶಾಸ್ತಿçÃಯ ಅಧ್ಯಯನ ಕೇಂದ್ರವನ್ನು 24 ಕೋ. ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು. ಈ ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸದ್ಯ ಈ ಕೆಂದ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
Leave a Comment