ಭಟ್ಕಳ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಒಂದೆಡೆ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರ ಸದ್ದು ಗದ್ದಲ ಹೆಚ್ಚಾದರೆ ಇನ್ನೊಂದೆಡೆ ಸಭೆಯಲ್ಲಿ ಬಹುತೇಕ ಸದಸ್ಯರು ಮಾಸ್ಕ ಧರಿಸಿಲ್ಲವಾಗಿರುವುದು ಕಂಡು ಬಂತು.

ಮಾಸ್ಕ್ ಹಾಕದೇ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಊರಿಗೆ ಹೇಳುವ ಪುರಸಭೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಬಹುತೇಕ ಸದಸ್ಯರು ಮಾಸ್ಕ ಹಾಕದೇ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು

ಕೋವಿಡ್ ಮೂರನೇ ಅಲೆ ನಿಯಂತ್ರಿಸುದಕ್ಕಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಯಂತಹ ನಿಯಮಗಳನ್ನು ಜಾರಿ ಮಾಡಿದೆ. ಅದರಂತೆ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಿದೆ. ಆದರೆ ಯಾರೂ ಎಷ್ಟರ ಮಟ್ಟಿಗೆ ಮಾಸ್ಕ್ ಧರಿಸುತ್ತಿದ್ದಾರೆ ಇಲ್ಲವೆಂಬುದು ಬೇರೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ದಂಡ ಹಾಗೂ ಸ್ವ್ಯಾಬ್ ಪರೀಕ್ಷೆ ಮಾಡುವ ವಿಧಿಸುವ ಪುರಸಭೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸದಸ್ಯರು ಸಾಮಾನ್ಯ ಸಭೆಯಲ್ಲಿ ಮಾಸ್ಕ್ ಹಾಕದೇ ಸಭೆಯಲ್ಲಿ ಪಾಲ್ಗೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅವರೇ ಉತ್ತರಿಸಬೇಕು.
ಸಭೆಯ ಆರಂಭದಲ್ಲಿ ಅಧ್ಯಕ್ಷರು ಮಾಸ್ಕ್ ನ್ನು ಹಾಕದೆ ಸಭೆ ಆರಂಭಿಸಿದ್ದು ನಂತರ ಮಾಧ್ಯಮದವರನ್ನು ನೋಡಿ ಅಧ್ಯಕ್ಷರು ಮಾಸ್ಕ್ ಧರಿಸಿ ಸಭೆ ಮುಂದುವರಿಸಿರುವುದು ಕಂಡು ಬಂತು.
Leave a Comment