ಸಾಮಾಜಿಕ ಜಾಲತಾಣ ಲ್ಲಿ ಯುವತಿಯ ಸೋಗಿನಲ್ಲಿ ನಕಲಿ ಖಾತೆ ತೆರೆದು, ಮಾಡಲ್ ಮಾಡಿಸುವುದಾಗಿಯುವತಿಯರ ಅರೆಬೆತ್ತಲೆ ಫೋಟೋ, ವಿಡಿಯೋ ಪಡೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಪ್ರಪಂಚನ್ ಬಂಧಿತ ಆರೋಪಿ, ಈತ ಇನ್ಸ್ಟಗ್ರಾಂನಲ್ಲಿ ನಕಲಿ ಖಾತೆ ತೆರೆದು ಯುವತಿಯರನ್ನು ವಂಚಿಸುತ್ತಿದ್ದ, ಹಲವರಿಗೆ ಬೇರೆಬೇರೆ ರೀತಿಯಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ ಕೆಲವರಿಗೆ ಮಾಡೆಲ್ ಮಾಡುವಾಸೆ ತೋರಿಸಿದ್ದ, ಮತ್ತೆ ಕೆಲವರಿಗೆ ಸಲಿಂಗಕಾಮಿ ಎಂದು ಪರಿಚಯಿಸಿಕೊಂಡಿದ್ದ ಎಂದು ಪೊಲೀಸರು ವಿಚಾರಣೆಯಿಂದ ಗೊತ್ತಾಗಿದೆ.
ಮಾಡೆಲ್ ಮಾಡುವ ಆಸೆ ತೋರಿಸಿ ನಗ್ನ ಪೋಟೋ, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ. ಅರೆಬೆತ್ತಲೆ ಪೋಟೋ ಕಳುಹಿಸಿಸುವವರಿಗೆ ಹಣ ಕೂಡ ನೀಡುತ್ತಿದ್ದ. ಅವರು ಆರೋಪಿಯ ಇನ್ಸ್ಟಗ್ರಾಂ ಖಾತೆಯನ್ನು ಬ್ಲಾಕ್ ಮಾಡಿದರೆ ಮತ್ತೆ ಬೇರೆ ಖಾತೆ ತೆರೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆರೋಪಿಯಿಂದ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಪ್ರಪಂಚನ್ ಕಳೆದ ಎರಡು ವರ್ಷಗಳಿಂದ ಇದೇ ಕೆಲಸ ಮಾಡುತ್ತ ಬಂದಿದ್ದು ನಾಲ್ಕೆöÊದು ನಕಲಿ ಇನ್ಸ್ಟಾಗಾಂ ಖಾತೆ ತೆರೆದಿದ್ದ ಎಂಬುದು ಗೊತ್ತಾಗಿದೆ. ಸುಮಾರು 1,000 ಕ್ಕ ಹೆಚ್ಚು ಖಾಸಗಿ ಪೋಟೋಗಳು ಹಾಗೂ 300 ರಿಂದ 400 ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Leave a Comment