ಹೊನ್ನಾವರ : ಸಮುದ್ರಕ್ಕೆ ಈಜಲು ತೆರಳಿದ ಇಬ್ಬರು ಮಕ್ಕಳು ನೀರಿನ ಸುಳಿಗೆ ಸಿಕ್ಕಿ ಮೃತ ಪಟ್ಟ ಘಟನೆ ಶನಿವಾರ ಮಂಕಿಯಲ್ಲಿ ನಡೆದಿದೆ.
ಮಂಕಿ ದೊಡ್ಡಗುಂದದ ಮನೋಜ ಬಾಬು ನಾಯ್ಕ (14) ಹಾಗೂ ಮಂಕಿ ತಾಳಮಕ್ಕಿಯ ದರ್ಶನ್ ಉದಯ ನಾಯ್ಕ (15) ಮೃತ ಮಕ್ಕಳು. ಮನೋಜ್ 9ನೇ ತರಗತಿ ವಿದ್ಯಾರ್ಥಿಯಾಗಿದ್ದು. ದರ್ಶನ್ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ನಾಲ್ಕೆöÊದು ಮಕ್ಕಳೊಂದಿಗೆ ಮಂಕಿ ತಾಳಮಕ್ಕಿ ಬಳಿ ಸಮುದ್ರಕ್ಕೆ ಈಜಲು ತೆರಳಿದ್ದರು.
ಮನೋಜ ಎಂಬಾತ ಮೊದಲು ಸಮುದ್ರ ಸುಳಿಗೆ ಸಿಕ್ಕಾಗ ಆತನನ್ನು ಅಪಾಯದಿಂದ ರಕ್ಷಿಸಲು ಸ್ನೇಹಿತ ದರ್ಶನ ತೆರಳಿದ್ದ. ಈ ವೇಳೆ ಸುಳಿಯಿಂದ ಹೊರಬರಲಾಗದೆ ಇಬ್ಬರು ಸಮುದ್ರ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳೀಯ ಮೀನುಗಾರರು ತಕ್ಷಣ ನೆರವಿಗೆ ಧಾವಿಸಿ ಸಮುದ್ರಕ್ಕೆ ಇಳಿದರೂ ವ್ಯರ್ಥವಾದಂತಾಯಿತು. ಮನೋಜನನ್ನು ತಕ್ಷಣ ಹಿಡಿದರು ಕೂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನೋರ್ವ ದರ್ಶನ್ ಶವ ತಕ್ಷಣ ದೊರೆತಿದೆ, ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪಿ.ಎಸ್.ಐ ಅಶೋಕ ಮಾಳಬಗಿ ತನಿಖೆ ಮುಂದುವರೆಸಿದ್ದಾರೆ.
Leave a Comment