ಹೊನ್ನಾವರ : ಮಳೆಗಾಲ ಮುಗಿದು ಮೂರು ತಿಂಗಳಾದರೂ ಮರಳು ತೆಗೆಯಲು ಅನುಮತಿ ನೀಡದೇ ಜಿಲ್ಲಾಡಳಿತವು ಕಣ್ಮಚ್ಚಿ ಕುಳಿತಿರುವುದನ್ನು ನೋಡಿದ ರೆ ಜಿಲ್ಲಾಡಳಿತಕ್ಕೆ ಕೊರೋನಾ ತಗುಲಿರುವಂತೆ ಕಂಡುಬರುತ್ತದೆ ಎಂದು ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ಯಾಮಸುಂದರ ಎಂ.ಭಟ್ಟ ವ್ಯಾಂಗ್ಯಮಾಡುವ ಮೂಲಕ ಕಿಡಿಕಾರಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಮರಳು ತೆಗೆಯುವುದನ್ನು ನಿಲ್ಲಿಸಲಾಗಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಮರಳು ತೆಗೆಯಲು ಅನುಮತಿ ನೀಡುವ ನಿರೀಕ್ಷೆ ಇತ್ತು. ಆದರೆ ಜನವರಿ ತಿಂಗಳು ಮುಗಿಯುತ್ತ ಬಂದರೂ ಇನ್ನೂ ಆ ಬಗ್ಗೆ ನಿರ್ದಿಷ್ಟ ಕ್ರಮ ಕೃಗೊಲ್ಳದೇ ಜಿಲ್ಲಾಡಳಿತವು ಜಿಲ್ಲೆಯ ಅಭಿವೃದ್ಧಿಗೆ ವಂಚಿಸುತ್ತಿದೆ ಎಂದು ಭಾವಿಸಬೇಕಾಗುತ್ತದೆ.
ಈ ವಿಚಾರದಲ್ಲಿ ಜಿಲ್ಲಾಡಳಿತಕ್ಕೆ ತಕ್ಕ ಮಾರ್ಗದರ್ಶನ ನೀಡುವಲ್ಲಿ ಜಿಲ್ಲಾಉಸ್ತುವಾರಿ ಸಚಿವರು, ಶಾಸಕರು ಮರೆತಂದೆ ಕಾಣುತ್ತಿದ್ದು ಬೇಸರ ತರಿಸ್ಮತ್ತಿದೆ ಎಂದಿದ್ದಾರೆ. ಈ ವರ್ಷ ಹೆಚ್ಚಿನ ಮಳೆಯಾಗಿರುವುದರಿಂದ ನದಿಗಳಲ್ಲಿ ಮರಳಿನ ಕೊರತೆ ಇಲ್ಲ. ಕರಾವಳಿ ಭಾಗದಲ್ಲಿ ಕೆಲವರು ಅಧಿಕಾರಿಗಳನ್ನು ತೃಪ್ತಿಪಡಿಸಿ ಅನಧಿಕೃತ ಮರಳು ತೆಗೆದು ಸಣ್ಣ ವಾಹನಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ.
ಇದು ಜನ ಪ್ರತಿನಿಧಿಗಳಿಗೂ ತಿಳಿದಿದೆ. ಆದರೂ ಜಿಲ್ಲೆಯಲ್ಲಿ ಸರಕಾರಿ ಕಾಮಗಾರಿಗಳಿಗೆ, ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳ ಕಟ್ಟಡಗಳಿಗೆ ಮರಳು ಸಿಗಲು ಇನ್ನೂ ಪ್ರಯತ್ನಿಸದಿರುವ ಹಾಗೂ ನಿರ್ದಿಷ್ಟ ಸೂಚನೆ ನೀಡಿ ಮರಳು ತೆಗೆಯಲು ಮತ್ತು ಸಾಗಾಟಕ್ಕೆ ಅನುಮತಿ ನೀಡಲು ಕ್ರಮವಾಗದಿರುವುದು ಬೇಸರ ತಂದಿದೆ. ಈ ವಿಚಾರದಲ್ಲಿ ಕೇವಲ ಗುತ್ತಿಗೆದಾರರಲ್ಲದೇ ಸಾರ್ವಜನಿಕರೂ ಧ್ವನಿ ಎತ್ತಬೇಕಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಕೂಡಲೇ ಮರಳು ತೆಗೆಯಲು ಅನುಮತಿ ನೀಡಬೇಕು. ಅಲ್ಲದೇ ವರ್ಷಪೂರ್ತಿ ಮರಳು ಸಿಗಲು ಪ್ರತಿ ತಾಲೂಕಿನಲ್ಲಿ ದಾಸ್ತಾನು ಯಾರ್ಡ್ಗಳನ್ನು ನಿರ್ಮಿಸಿ ರಾಜಧನ ಸಹಿತ ದರ ನಿಗದಿಪಡಿಸಬೆಕು. ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಅಲ್ಲದೇ ಮರಳು ಮಾಫಿಯಾ ನಿಲ್ಲುತ್ತದೆ. ಈ ವಿಚಾರದಲ್ಲಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ತುರ್ತಾಗಿ ಕ್ರಮ ಕೈಗೊಳ್ಳಬೆಕು ಎಂದು ಆಗ್ರಹಿಸಿದ್ದಾರೆ.
Leave a Comment