ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಹಾಗೂ ಅವರ ಬೆಂಬಲಿಗರು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೆ ಶ್ರೀ ಅಯ್ಯಪ್ಪನ ದರ್ಶನ ಪುನೀತರಾಗಿದ್ದಾರೆ

ಹೌದು ಇಷ್ಟು ದಿನ ಕ್ಷೇತ್ರದ ಮೂಲೆ ಮೂಲೆಗೆ ತೆರಳಿ ಜನರ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ನಡೆಸುತ್ತಿದ್ದ ಶಾಸಕರು ಇದೆ ಮೊದಲ ಬಾರಿಗೆ ಅಯ್ಯಪ್ಪನ ಮಾಲೆ ಧರಿಸಿ ಮಾಲಾಧಾರಿಗಳು ತೊಡುವ ಕಪ್ಪುಬಣ್ಣದ ಬಟ್ಟೆ ತೊಟ್ಟು ತನ್ನ ಬೆಂಬಲಿಗರೊಂದಿಗೆ
ಜನಸಾಮನ್ಯರಂತೆ ಶಬರಿಮಲೆಯ 18 ಮೆಟ್ಟಿಲೇರಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಅನುಸರಿಸಬೇಕಾದ ನಿಯಮವನ್ನು ಶಾಸಕ ಸುನೀಲ ನಾಯ್ಕ ದೃಢವಾಗಿ ಪಾಲಿಸಿದ್ದು. ಮಾಲಾಧಾರಿಯಾದ ಬಳಿಕವೂ ಕಟ್ಟುನಿಟ್ಟಾಗಿ ವಿಧಿ ವಿಧಾನಗಳನ್ನು ಶಾಸಕರು ಹಾಗೂ ಅವರ ಬೆಂಬಲಿಗರು ಪಾಲಿಸಿದ್ದಾರೆ.
ಶಾಸಕರು ಸೇರಿದಂತೆ ಒಟ್ಟೂ 40 ಮಂದಿ ತನ್ನ ಬೆಂಬಲಿಗರೊಂದಿಗೆ ಜನವರಿ 15 ರಂದು ರೈಲಿನ ಮೂಲಕ ಶಬರಿಮಲೆಗೆ ತೆರಳಿ ಪಂಪದಲ್ಲಿ ಗುರುಸ್ವಾಮಿಗಳಾದ ವೆಂಕಟೇಶ ನಾಯ್ಕ ಹಾಗೂ ಶನಿಯಾರ ನಾಯ್ಕ ಶಾಸಕರಿಗು ಸೇರಿ 40 ಮಂದಿಗೆ ಅಯ್ಯಪ್ಪನ ಮಾಲೆ ಧರಿಸಿ ಇರುಮೂಡಿ ಕಟ್ಟಿ ಮೊದಲ ಬಾರಿಗೆ ಶಬರಿಮಲೆಯಲ್ಲಿ 18 ಮೆಟ್ಟಿಲೇರಿ ಅಯ್ಯಪ್ಪನ ದರ್ಶನ ಪಡೆದುಕೊಂಡರ ಅವರು ನಂತರ ಕೇರಳದಿಂದ ಹರಟು ಭಟ್ಕಳ ತಲುಪಿದ್ದಾರೆ.
ಈ ವೇಳೆಯಲ್ಲಿ ಬೆಂಬಲಿಗರಾದ ತಾಲೂಕಾಧ್ಯಕ್ಷ ಮಹೇಂದ್ರ ನಾಯ್ಕ ಉಪಾಧ್ಯಕ್ಷ ಚಂದ್ರು ನಾಯ್ಕ,
ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಬರೀಶ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಧರ ನಾಯ್ಕ,,ಸಂತೋಷ ನಾಯ್ಕ, ಜಿಲ್ಲಾ ಸದಸ್ಯ ಉದಯ ದೇವಾಡಿಗ, ತಾಲೂಕಾ ಸದದ್ಯ ಸುಭಾಷ್ ನಾಯ್ಕ, ವೆಂಕಟೇಶ ನಾಯ್ಕ, ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment