ಗಂಗಾವಳಿ, ಅಘನಾಶಿನಿ, ಶರಾವತಿಯಲ್ಲಿ ಮರಳು ತೆಗೆಯಲು ಸಿದ್ಧತೆ
ಕಾರವಾರ : ಮರಳುಗಾರಿಕೆಗೆ ಅನುಮತಿ ನೀಡದೇ ಜಿಲ್ಲೆಯಲ್ಲಿ ಮರಳು ಸರಿಯಾಗಿ ಸಿಗದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ ಎನ್ನುವ ಕೂಗು ಹಲವು ದಿನದಿಂದ ಕೇಳಿ ಬಂದಿತ್ತು. ಜಿಲ್ಲಾಡಳಿತ ಅನವಶ್ಯಕವಾಗಿ ಮರಳುಗಾರಿಕೆಗೆ ಅನುಮತಿ ಕೊಡಲು ತಡ ಮಾಡುತ್ತಿದೆ ಎನ್ನುವ ಆರೋಪ ಸಹ ಕೇಳಿ ಬಂದಿತ್ತು. ಸದ್ಯ ಕೊನೆಗೂ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ಅನುಮತಿಯನ್ನು ನೀಡಿದೆ.
ಜಿಲ್ಲೆಯ ಅಘನಾಶಿನಿ. ಶರಾವತಿ ಹಾಗೂ ಗಂಗಾವಳಿ ನದಿಯಲ್ಲಿ ಮರಳುಗಾರಿಕೆ ತೆಗೆಯಲು ಅನುಮತಿಯನ್ನ ನೀಡಿದ್ದು ಅಧಿಕೃತವಾಗಿ ಲೀಸ್ ಪಡೆದವರು ಮರಳನ್ನ ತೆಗೆಯಲು ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದು ಇನ್ನು ಒಂದೆರಡು ದಿನದಲ್ಲಿ ಮರಳು ತೆಗೆಯುವ ಕಾರ್ಯದಲ್ಲಿ ತೊಡಗಲಿದ್ದಾರೆ.
ಜಿಲ್ಲೆಯಲ್ಲಿ ಕಾರವಾರದ ಕಾಳಿ, ಅಂಕೋಲಾದ ಗಂಗಾವಳಿ, ಕುಮಟಾದ ಅಘನಾಸಿನಿ ಹಾಗೂ ಹೊನ್ನಾವರದ ಶರವಾತಿ ನದಿಯಲ್ಲಿ ಮರಳು ತೆಗೆಯಲು ಅನುಮತಿ ಇದ್ದು ಕಳೆದ ಒಂದು ತಿಂಗಳ ಹಿಂದೆಯೇ ಕಾಳಿ ನದಿಯಲ್ಲಿ ಮರಳು ತೆಗೆಯಲು ಅನುಮತಿಯನ್ನ ನೀಡಲಾಗಿತ್ತು. ಇನ್ನು ನಂವೆಬರ್ ತಿಂಗಳಲ್ಲಿಯೇ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ದಲ್ಲಿ ಮರಳುಗಾರಿಕೆ ಪ್ರಾರಂಭಿಸಲು ಪರಿಸರ ಅನುಮತಿ ದೊರೆತಿದ್ದರು ಜಿಲ್ಲಾಡಳಿತ ಅವಕಾಶ ಅನುಮತಿ ಕೊಟ್ಟಿರಲಿಲ್ಲ.
ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲೂ ಮರಳುಗಾರಿಕೆಗೆ ಅನುಮತಿ ಇಲ್ಲದ ಕಾರಣ ಹೆಚ್ಚಾಗಿ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ದಲ್ಲಿ ತೆಗೆಯುವ ಮರಳಿನ ಮೇಲೆ ಉಳಿದ ತಾಲೂಕಿನವರು ಅವಳಂಬಿತರಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮರಳು ಸಿಗದೇ ಅಬಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಸದ್ಯ ಅಂಕೋಲಾದಲ್ಲಿ 8, ಕುಮಟಾದಲ್ಲಿ 33 ಹಾಗೂ ಹೊನ್ನಾವರದಲ್ಲಿ 45 ಅಧಿಕೃತವಾಗಿ ಲೀಸ್ ಪಡೆದವರಿಗೆ ಸೇರಿ ಒಟ್ಟು 86 ಲೀಸ್ ಪಡೆದವರಿಗೆ ಮರಳು ತೆಗೆಯಲು ಅನುಮತಿಯನ್ನ ನೀಡಲಾಗಿದೆ.
ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮರಳುಗಾರಿಕೆ ನಡೆಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಇನ್ನು ಒಂದೆರಡು ದಿನದಲ್ಲಿ ಮರಳು ತೆಗೆಯುವ ಕಾರ್ಯವನ್ನ ಪ್ರಾರಂಭ ವಾಗಲಿದೆ ಎನ್ನಲಾಗಿದೆ.
ಮರಳು ದರ ನಿಗದಿ
ಮರಳುಗಾರಿಕೆಅನುಮತಿ ನೀಡಿರುವ ಜಿಲ್ಲಾಡಳಿತ ಮರಳಿಗೆ ದರವನ್ನ ಸಹ ನಿಗದಿ ಮಡಿದ್ದು ಗ್ರಾಹಕರಿಗೆ ನಿಗದಿ ಮಾಡಿದ ದರದಲ್ಲಿಯೇ ಮರಳನ್ನ ನೀಡುವಂತೆ ಲೀಸ್ ಪಡೆದವರಿಗೆ ಸೂಚಿಸಲಾಗಿದೆ. ಪ್ರತಿ ಟನ್ಗೆ 600 ರೂಪಾಯಿ ದರವನ್ನ ನಿಗದಿ ಮಾಡಿದ್ದು, 20 ಕಿಲೋ ಮೀಡರ್ ಒಳಗೆ ಸಾಗಾಣಿಕೆ ವೆಚ್ಚಕ್ಕೆ 3 ಸಾವಿರ ರೂಪಾಯಿ ಹಣವನ್ನ ಗ್ರಾಹಕರಿಂದ ಪಡೆಯಬೇಕು ಎಂದು ನಿಗದಿ ಮಾಡಿದ್ದ 20 ಕಿಲೋ ಮೀಟರ್ ನಂತರ ಕಿಲೋ ಮೀಟರ್ಗೆ 65 ರೂಪಾಯಿ ಪಡೆಯುವಂತೆ ಸೂಚಿಸಲಾಗಿದ್ದು, ಗ್ರಾಹಕರಿಂದ ಹೆಚ್ಚಿನ ಹಣವನ್ನ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.
Leave a Comment