ನವದೆಹಲಿ : ವಿಲ್ ಮಾಡದೆ ಮೃತಪಟ್ಟ ಹಿಂದೂ ತಂದೆಯ ಹೆಣ್ಣುಮಕ್ಕಳು ಅವರ ಸ್ವಯಂ -ಸಂಪಾದನೆ ಮತ್ತು ಇತರ ಆಸ್ತಿಗಳನ್ನು ಉತ್ತರಾಧಿಕಾರಿಯಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್, ಅಬ್ದುಲ್ ನಜೀರ್ ಮತ್ತು ಕೃಷ್ಣ ಮರಾರಿ ಅವರಿದ್ದ ವಿಭಾಗೀಯ ಪೀಠ, ಹಿಂದೂ ಉತ್ತರಾದಿಕಾರ ಕಾಯ್ದೆಯಡಿಯಲ್ಲಿ ಹಿಂದೂ ಮಹಿಳೆಯರು ಮತ್ತು ವಿಧವೆಯರ ಆಸ್ತಿ ಹಕ್ಕುಗಳ ಅಡಿಯಲ್ಲಿ ಈ ಆದೇಶ ನೀಡಿದ್ದಾರೆ.
ಮೃತಪಟ್ಟ ತಂದೆಯ ಸಹೋದರರ ಪುತ್ರರು ಮತ್ತು ಪುತ್ರಿಯರಂತಹ ಕುಟುಂಬದ ಇತರ ಮೇಲಾಧಾರ ಸದಸ್ಯರಿಗಿಂತ ಅಂತಹ ಹೆಣ್ಣುಮಕ್ಕಳಿಗೆ ಆಧ್ಯತೆ ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ವಿಲ್ ಬರೆಯದೆ ಮೃತಪಟ್ಟ ಹಿಂದೂ ವ್ಯಕ್ತಿಯದ್ದು ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿಯಾಗಿದ್ದರೆ ಅಥವಾ ಕುಟುಂಬದ ಆಸ್ತಿಯ ವಿಭಜನೆಯಲ್ಲಿ ಪಡೆದ ಆಸ್ತಿಯಾಗಿದ್ದರೆ ಅನುವಂಶಿಕವಾಗಿ ಆಸ್ತಿ ಪಡೆಯಲು ಪುತ್ರಿಗೆ ಅಧಿಕಾರ ಇರುತ್ತದೆ. ಎಂದು ಕೋರ್ಟ್ ಹೇಳಿದೆ.
ಯಾವುದೇ ಕನೂನುಬದ್ಧ ಉತ್ತರಾಧಿಕಾರಿಯ ಅನುಪಸ್ಥಿತಿಯಲ್ಲಿ, ತನ್ನ ತಂದೆಯ ಸ್ವಯಂ ಸಂಪಾದಿತ ಆಸ್ತಿಯನ್ನು ಉತ್ತರಾಧಿಕಾರವಗಿ ಪಡೆಯುವ ಮಗಳ ಹಕ್ಕಿಗೆ ಸಂಭಧಿಸಿದ ಕಾನೂನು ಸಮಸ್ಯೆಯನ್ನು ಪೀಠವು ಪ್ರಸ್ತಾಪ ಮಾಡಿದೆ. ನ್ಯಾಯಮೂರ್ತಿ ಮುರಾರಿ ಅವರು 51 ಪುಟಗಳ ತೀರ್ಪನ್ನು ಬರೆದಿದ್ದಾರೆ. ಉಯಿಲು ಇಲ್ಲದೆ ಮರಣ ಹೊಂದಿದೆ ತಂದೆಯ ಮರಣದ ನಂತರ ಅಂತಹ ಆಸ್ತಿಯ ಉತ್ತರಾಧಿಕಾರವಾಗಿ ಮಗಳಿಗೆ ಅಥವಾ ತಂದೆಯ ಸಹೋದರನಿಗೆ ಹಂಚಿಕೆಆಗುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ.
ವಿಧವೆ ಅಥವಾ ಮಗಳು ಸ್ವಯಂ – ಸ್ವಾಧೀನಪಡಿಸಿಕೊಂಡ ಆಸ್ತಿ ಅಥವಾ ಮೃತಪಟ್ಟ ಹಿಂದೂ ವ್ಯಕ್ತಿಯ ಪುತ್ರಿ ಆಸ್ತಿಯ ವಿಭಜನೆಯಲ್ಲಿ ಪಡೆದ ಪಾಲಿಗೆ ಉತ್ತರಾಧಿಕಾರ ಪಡೆಯುವ ಹಕ್ಕನ್ನು ಹಳೆಯ ಸಾಂಪ್ರದಾಯಕ ಹಿಂದೂ ಕಾನೂನುನಿನಲ್ಲಿ ಇದೆ. ಮಾತ್ರವಲ್ಲದೆ ವಿವಿಧ ನ್ಯಾಯಾಂಗ ತೀರ್ಪುಗಳಿಂದಲೂ ಇದನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
Leave a Comment