ಹುಬ್ಬಳ್ಳಿ : ಕೋರ್ ಬಿಟ್ ಕಾಯ್ನಿ ಎಂಬ ವೆಬ್ ಸೈಟ್ ನಲ್ಲಿ ಹಣ ಹೂಡಿಕೆ ಮಾಡಿದ್ದ ನಗರದ ವ್ಯಕ್ತಿಗೆ ಬಯೋಬ್ಬರಿ 22.11 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ನವ ಆಯೋಧ್ಯಾನಗರದ ನಿವಾಸಿ ಈರಣ್ಣ ಬೋರಶೆಟ್ಟಿ ಎಂಬುವರೇ ಈ ವಂಚನೆ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಿರುವ ವ್ಯಕ್ತಿ, ಹಣ ಹೂಡಿಕೆ ಮಾಡಿದರೆ ಡಬಲ್ ಮಾಡಬಹುದು ಎಂದು ಬಿಟ್ ಕಾಯಿನ್ ನೆಕ್ಸಾ ಕಾಯಿನ್, ರೊಪಿಗೊಲ್ಡ್ ಸೇರಿದಂತೆ ವಿವಿಧ ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವಂಚನೆ ಪ್ರಕರಣ ಈವರೆಗೆ ನಡೆದಿದ್ದವು. ಈಗದರ ಮುಂದವರೆದ ಭಾಗವಾಗಿ ಕೋರ್ ಬಿಟ್ ಕಾಯಿನ್ ಎಂಬ ವೆಬ್ಸೆöÊಟ್ ನಗರದ ಹೊಡಿಕೆದಾರರಿಗೆ ಪಂಗನಾಮ ಹಾಕಿದೆ.
ಕಲಬುರ್ಗಿಯ ಮಹಮ್ಮದ್ ಹಬೀಬ್ ಹಾಗೂ ಪಂಜಾಬ್ ರಾಜ್ಯದ ಮಹ್ಮದ್ ಆಬ್ಬಾಸ್ ಮಹ್ಮದ್ ಯೂಸಫ್ ಎಂಬುವರು ವಂಚಿಸಿದ್ದಾರೆ ಎಂದು ಇಲ್ಲಿನ ಹುಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯ ಎಂಬುವರಿಗೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಈರಣ್ಣ ತಿಳಿಸಿದ್ದಾರೆ.
ಕೋರ್ ಬಿಟ್ ಕಾಯಿನ್ ವೆಬ್ಸೈಟ್ನಲ್ಲಿ ಹೂಡಿಕೆ : ದೂರುದಾರರು ತಮ್ಮಲ್ಲಿರುವ ಹಣವನ್ನು ಹೂಡಿಕೆ ಮಾಡುವ ಉತ್ಪಾಹದಲ್ಲಿ ಅವರಿಗೆ ತಮ್ಮಲ್ಲಿರುವ ಹಣವನ್ನು ಹೂಡಿಕೆ ಮಾಡುವ ಉತ್ಸಾಹದಲ್ಲಿ ಅವರಿಗೆ ಆರೋಪಿತರು ಪರಿಚಯವಾಗಿದ್ದಾರೆ. ಆರೋಪಿತರು ತಮ್ಮ ಕೋರ್ ಬಿಟ್ ಕಾಯಿನ್ ಎಂಬ ವೆಬ್ ಸೈಟ್ ಮೂಲಕ ಹಣ ಹೂಡಲು ಹೇಳಿದ್ದಾರೆ. ಇದನ್ನು ನಂಬಿದ ದೂರುದಾರ ಈರಣ್ಣ 20.36ಲಕ್ಷ ಹಾಗೂ ಅವರ ಪತ್ನಿ 1.75 ಲಕ್ಷ ರೂ ಹಣವನ್ನು 2021 ಅಗಸ್ಟ್ 5 ರಿಂದ 2022 ಜನವರಿ 4 ರ ಒಳಗಡೆ ವೆಬ್ ಸೈಟ್ ಮೂಲಕ ಹಣ ಜಮಾ ಮಾಡಿದ್ದಾರೆ. ಈಗ ಇಬ್ಬರು ಆರೋಪಿತರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಒಟ್ಟು 22.11 ಲಕ್ಷ ರೂ. ಪಡೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತೆಗೆಯುವುದಾಗಿ ಎಚ್ಚರಿಕೆ ನೀಡಿದ್ದರು. ಜನವರಿ 21 ರಂದು ಹುಬ್ಬಳ್ಳಿ ಗಬ್ಬರ ಕ್ರಾಸ್ ಎಲ್.ಜಿ ಗೋಡೌನ್ ಎದುರಿನ ಸಬ್ ಬ್ರಾö್ಯಂಚ್ ಸೈಟ್ನಿಂದ ಭೂಮ್ ಫ್ರೆಶರ್ ವಾಹನ ಕಳ್ಳತನ ಮಡಿಕೊಂಡು ಹೋಗಿದ್ದಾರೆ ಎಂದು ಕಂಪನಿಯ ಪಿ. ವಿಜಯಕುಮಾರ ಎಂಬುವರು ದೂರು ದಾಖಲಿಸಿದ್ದಾರೆ.
Leave a Comment