ಕಾರವಾರ : ತನ್ನ ಮಗಳ ಸಮಾನಳಾದ ಬಾಲಕಿಯ ಮೇಲೆ . ಅತ್ಯಾಚಾರ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಶಿರಸಿಯ ಗುಲಾಬ್ ಚಂದ್ ಚೀಮಾಲಾಲ್ ಶಾಹ ಈತನಿಗೆ ಕಾರವಾರದ ಎಫ್. ಟಿ. ಎಸ್ ಸಿ-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 20 ವರ್ಷ ಜೈಲು ಹಾಗೂ 77,500 ರೂ ದಂಡ ವಿಧಿಸಿ ಮಂಗಳವಾರ ಅಂತಿಮ ತೀರ್ಪು ನೀಡಿದೆ.
ಸುಮಾರು 37 ವರ್ಷ ಪ್ರಾಯದ ಗುಲಾಬ್ ಚಂದ್ ಚೀಮಾಲಾಲ್ ಈತನು ಮೂಲತಃ ದೇಸಾಯಿ ಓಣಿ ಯಾದಗಿರಿಯವನಾಗಿದ್ದು ಅಡುಗೆ ಕೆಲಸ ಮಾಡಲು ಶಿರಸಿಗೆ ನಗರಕ್ಕೆ ಬಂದು ಕುಲ್ಕಣಿ ರಸ್ತೆಯಲ್ಲಿ ಫಿರ್ಯಾದಿಯ ತಾಯಿ, ಫಿರ್ಯಾದಿಯ ತಮ್ಮನೊಂದಿಗೆ ಉಳಿದುಕೊಂಡಿದ್ದ.
2021 ರ ಎಪ್ರಿಲ್ 7 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಫಿರ್ಯಾದಿಯ ತಾಯಿ ಪೇಟೆಗೆ ಹೋದಾಗ ಹಾಗೂ ಫಿರ್ಯಾದಿಯ ತಮ್ಮ ಹೊರಗಡೆ ಆಟ ಆಟಲು ಹೋದಾಗ ಇದೇ ಸಮಯವೆಂದು ಫಿರ್ಯಾದಿ ಒಬ್ಬಳೇ ಮನೆಯಲ್ಲಿ ಇರುವಾಗ ಇವಳ ಸಾಕು ತಂದೆ ಎಂದೂ ಕರೆಸಿಕೊಳ್ಳುತ್ತಿದ್ದ ಗುಲಾಬ್ ಚಂದ್, ಬಾಲಕಿಯ ಮೇಲೆ ಬಲವಂತದಿAದ ದೈಹಿಕ ದೌರ್ಜನ್ಯವೆಸಗಿ ಈ ವಿಷಯವನ್ನುನಿನ್ನ ತಾಯಿಗೆ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೆದರಿಸಿದ್ದ.
ನಂತರದ ಕೆಲವು ದಿನಗಳಲ್ಲಿ ಮತ್ತೆ 2-3 ಬಾರಿ ಮಧ್ಯರಾತ್ರಿ ಫಿರ್ಯಾದಿಯ ಬಳಿ ಬಂದು ಬಾಗಿಲು ಹಾಕಿ ಅತ್ಯಾಚಾರ ನಡೆಸಿದ್ದ. ಕೊನೆಯ ಬಾರಿ (06/05/2021) ಮಧ್ಯರಾತ್ರಿ ಸುಮಾರಿಗೆ ಮತ್ತೆ ರೇಪ್ ಮಾಡಿ ಬಳಸಿದ ಟೀಶರ್ಟನ್ನು ಅಲ್ಲೇ ಬಿಸಾಡಿ ಹೋಗಿದ್ದ ಎಂದು ದೂರಿನಲ್ಲಿ ತಿಳಿಸಿದಂತೆ ಭಾರತೀಯ ದಂಡ ಸಂಹಿತೆ ಕಲಂ : 341, 376, 506 ಹಾಗೂ ಕಲಂ : 4 – 6 ಪೋಕ್ಸೊ ಕಾಯಿದೆ ಅಡಿಯಲ್ಲಿ ಶಿರಸಿ ವೈತ್ತದ ಸಿ.ಪಿ.ಐ. ರಾಮಚಂದ್ರ ನಾಯಕ ಇವರು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ ತನಿಖೆ ಜರುಗಿಸಿ ಅಂತಿಮ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಎಫ್. ಟಿ. ಎಸ್. ಸಿ. – 1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಈ ಮೇಲಿನಂತೆ ತೀರ್ಪು ನೀಡಿದ್ದಾರೆ. ಉ.ಕ ಜಿಲ್ಲೆಯಲ್ಲಿ ಪ್ರಸುತ್ತ ನ್ಯಾಯಾಧೀಶರು ಶಿಕ್ಷೆಗೊಳಪಡಿಸಿದ 40 ನೇ ಪ್ರಕರಣ ಇದಾಗಿದೆ. ಸರಕಾರದ ಪರವಾಗಿ ವಶೇಷ ಸರ್ಕಾರಿ ಅಭಿಯೋಜಕ ಸುಬಾಷ ಪಿ. ಕೈರನ್ನವಾದ ಮಂಡಿಸಿದ್ದರು.
Leave a Comment