ಶಿರಸಿ : ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮ ಮೀರಿ ಅಂದರ್ – ಬಾಹರ್ ಆಡುತ್ತಿದ್ದ ತಂಡದ ಮೇಲೆ ಖಚಿತ ಮಾಹಿತಿಯನ್ನಾಧರಿಸಿ ಹೊಸ ಮಾರುಕಟ್ಟೆ ಠಾಣೆಯ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದು, ಅವರಿಂದ ನಗದು ಹಾಗೂ ಆಟಕ್ಕೆ ಬಳಸಲಾದ ಸಮಾಗ್ರಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ನೆಹರುನಗರದ ಅಸ್ಲಾಂ ಮೌಲಾಲಿ ಮಳಗಿ. ರವಿ ನಾಯ್ಕ್, ಸರ್ಫರಾಜ್ ಹಂಚಿನಮನಿ ಮಜೀದ್ ಶೇಖ್, ಇರ್ಫಾನ್ ಅಲಿ, ಅಸ್ಲಾಂ ಶರೀಫ್ ಹಾಗೂ ಸರ್ಫರಾಜ್ ಮದನಸಾಬ್ ಎಳ್ಳುರ ವಶದಲ್ಲಿರುವವರು.
ಇವರು ಸಾರ್ವಜನಿಕ ಸ್ಥಳವಾದ ನಗರದ ಕೋಟೆಕೆರೆ ಗ್ಯಾಸ್ ಪಂಪ್ ಹಿಂದುಗಡೆಯ ಜಾಗದಲ್ಲಿ ಅಂದರ್ – ಬಾಹರ್ ಆಡುತ್ತಿದ್ದರು. ಇವರಿಂದ 6370 ರೂ. ಆಟಕ್ಕೆ ಬಳಸಲಾದ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
Leave a Comment