ತಾಲೂಕಿನ ಸರ್ಪನಕಟ್ಟೆ ಕೋಣಾರ ಬೀಳುರುಮನೆ ಕ್ರಾಸ್ ಸಮೀಪ ಬೈಕ್ ಹಾಗೂ ಬುಲೆರೋ ವಾಹನ ಮುಖಾಮುಖಿ ಢಿಕ್ಕಿಯಾಗಿರುವ ಘಟನೆ ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಕೊಂಡಿದ್ದಾನೆ. ಗಂಭೀರವಾಗಿ ಗಾಯಕೊಂಡ ಬೈಕ್ ಸವಾರನನ್ನು ಸುಂದರ ನಾಗೇಂದ್ರ ಮೇಸ್ತ ಎಂದು ತಿಳಿದು ಬಂದಿದೆ.
ಈತ ಸರ್ಪನಕಟ್ಟೆಯಿಂದ ಕುಂಟವಾಣಿಕಡೆಗೆ ಹೋಗಿತ್ತಿದ್ದ ವೇಳೆ ಬುಲೆರೋ ವಾಹಣವೊಂದು ಕುಂಟವಾಣಿಯಿಂದ ಸರ್ಪನಕಟ್ಟೆ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿ ತನದಿಂದ ಚಲಾಯಿಸಿಕೊಂಡು ಬಂದವನು ಅದರ ವೇಗ ನಿಯಂತ್ರಿಸಲಾಗದೆ ಕೋಣಾರ ಬೀಳುರುಮನೆ ಕ್ರಾಸ್ ಸಮೀಪ ಬೈಕಗೆ ಢಿಕ್ಕಿ ಹೊಡಿದು ಅಪಘಾತ ಪಡಿಸಿದ್ದು.
ಅಪಘಾತದಲ್ಲಿ ಬೈಕ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment