ಶಿವಮೊಗ್ಗ : ಶಿವಮೊಗ್ಗ ನಗರದ ವಾಸವಿ ಅಕಾಡಮಿ ಟ್ರಸ್ಟ್ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ವತಿಯಿಂದ ಶಿವಮೊಗ್ಗ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಆಯ್ದ ಪ್ರಾಥಮಿಕ ಶಾಲೆಗಳಲ್ಲಿ 2022 – 23 ರ ಶೈಕ್ಷಣಿಕ ವರ್ಷದಲ್ಲಿ ಎಲ್.ಕೆ.ಜಿ ಯಿಂದ 7 ನೇ ತರಗತಿಯವರೆಗೆ ಸಂಸ್ಕೃತವನ್ನು ಭೋಧಿಸಲು ಹತ್ತನೇ ತರಗತಿ ಪಾಸಾದ ಆಸಕ್ತ 25 ರಿಂದ 40 ವರ್ಷದೊಳಗಿನ ಗೃಹಿಣಿಯರು, ಬೇರೆ ಅರೆ ಉದ್ಯೋಗದಲ್ಲಿರುವವರು, ಸಂಸ್ಕೃತದಲ್ಲಿ ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆ ಆದ ಅಭ್ಯರ್ಥಿಗಳಿಗೆ ಗೌರವಧನನದೊಂದಿಗೆ ಸಂಸ್ಕೃತ ಭೋಧನೆಯ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಪಾಸಾದವರಿಗೆ ಗೌರವ ಸಂಭಾವನೆ ಮೇರೆಗೆ ಶಾಲೆಗಳಲ್ಲಿ ಸಂಸ್ಕೃತ ಶಿಕ್ಷಕ / ಶಿಕ್ಷಕಿಯರಾಗಿ ನಿಯಕ್ತಿಗೊಳಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ 10 ಜನರಿಗೆ ಮಾತ್ರ ಅವಕಾಶವಿದ್ದು ಮೊದಲ ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ದಿನಾಂಕ : 04/02/2022 ರ ಒಳಗಾಗಿ ತಮ್ಮ ವಿವರಗಳೊಂದಿಗೆ ಅರ್ಜಿಯನ್ನು ಎಸ್. ಕೆ. ಶೇಷಚಲ ಪ್ರಧಾನ ಕಾರ್ಯದರ್ಶಿ, ವಸವಿ ಅಕಾಡೆಮಿ ಟ್ರಸ್ಟ್, ಕೋಟೆರಸ್ತೆ ಶಿವಮೊಗ್ಗ ಇಲ್ಲಿನ ಕಳಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಅ.ನಾ ವಿಜಯೇಂದ್ರರಾವ್ (9448790127) ಇವರನ್ನು ಸಂಪರ್ಕಿಸುವAತೆ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಸಧ್ಯಕ್ಷ ಟಿ.ವಿ. ನರಸಿಂಹ ಮೂರ್ತಿ ತಿಳಿಸಿದ್ದಾರೆ.
Leave a Comment