ಹೊನ್ನಾವರ : ರಾಜ್ಯ ಸರ್ಕಾರ ಭೂಮಿ ನೀಡಿದರೆ ಪಟ್ಟಣದಲ್ಲಿ ತಕ್ಷಣ ಫ್ಲೈ ಓವರ್ ಮಂಜೂರು ಮಾಡುವುದಾಗಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಐಆರ್ಬಿ ಅಧಿಕಾರಿಗಳ ಸಭೆಯ ನಂತರ ಮುಖಂಡರಿಗೆ ಭರವಸೆ ನೀಡಿದರು. ಹೊನ್ನಾವರದಲ್ಲಿ ಫ್ಲೆöÊ ಓವರ್ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಗೃಹಸಚೀವರ ಉಪಸ್ಥಿಯಲ್ಲಿ ಎರಡು ಸಭೆಗಗಳು ನಡೆದಿದೆ. ಆದರೆ ಯಾವುದೇ ಸಾಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಇಬ್ಬರೂ ಶಾಸಕರು ಈ ಬಗ್ಗೆ ಇನ್ನೊಮ್ಮೆ ಸಭೆ ಆಯೋಜಿಸಿ ಸರ್ಕಾರದಿಂದ ಭೂಮಿ ನೀಡಿದರೆ ನಾನು ತಕ್ಷಣ ಫ್ಲೈ ಈವರ್ ಮಾಡಿಕೊಡಿಸುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ರಘು ಫೈ ಮಾತನಾಡಿ. ಹೊನ್ನಾವರದಲ್ಲಿ ಫ್ಲೈ ಓವರ್ ತುಂಬಾ ಅವಶ್ಯಕತೆ ಇದೆ. ಈಗಾಗಲೇ ಈ ಬಗ್ಗೆ ಹಲವು ಬರಿ ಸಾರ್ವಜನಿಕ ಸಭೆ, ಹೋರಾಟ ನಡೆದಿದೆ. ಅಗತ್ಯ ಬಿದ್ದರೆ ಇನ್ನೊಮ್ಮೆ ಹೋರಾಟ ಮಾಡಲಾಗುವುದು ಎಂದರು.
ಈ ಸಂಬರ್ಭದಲ್ಲಿ ಸಂಸದರು ಶಾಸಕ ದಿನಕರ ಶೆಟ್ಟಿ ಹಾಗೂ ಸುನೀಲ ನಾಯ್ಕರವರ ಬಳಿ ಚೆರ್ಚೆ ನಡೆಸಿದರು. ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಕಾಮತ, ಉಮೇಶ ನಾಯ್ಕ, ಎಂಜಿ ನಾಯ್ಕ, ಸುಬ್ರಾಯ ನಾಯ್ಕ, ಸುರೇಶ ಖಾರ್ವಿ, ಸುರೇಶ ಹರಿಕಂತ್ರ, ಗಣಪತಿ ನಾಯ್ಕ ಹಳದೀಪುರ, ಎಂ.ಎಸ್.ಹೆಗಡೆ ಕಣ್ಣಿ ಮುಂತಾದವರು ಇದ್ದರು.
Leave a Comment