ಅಂಕೋಲಾ : ಮದುವೆಯಾಗುತ್ತೇನೆಂದು ಪುಸಲಾಯಿಸಿ ಅಪ್ರಾಪ್ತಳನ್ನ ಅತ್ಯಾಚಾರಗೈದು, 5 ತಿಂಗಳ ಗರ್ಭಿಣಿಯನ್ನಾಗಿಸಿದ ಘಟನೆ ನಡೆದಿದೆ.
ವಿವಾಹಿತನಾಗಿರುವ ಅಜೀತ್ ಪೆಡ್ನೇಕರ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪಿಎಸೈ ಪ್ರವೀಣಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ವಿಶೇಷ ದಳ ರಚಿಸಲಾಗಿದೆ.
Leave a Comment