ಹುಬ್ಬಳ್ಳಿ : ನಗರದ ವೈದ್ಯರೊಬ್ಬರಿಗೆ ಕರೆ ಮಡಿ ಅವರ ಕ್ರೇಡಿಟ್ ಕಾರ್ಡ್ ನಂಬರ್ ಪಡೆದುಅವರ ಖಾತೆಯಿಂದ 1,30,000 ರೂ. ಲಪಟಾಯಿಸಿದ ಘಟನೆ ನಡೆದಿದೆ.
ಡಾ. ಪ್ರಭು ಬಿರಾದಾರ ಹಣ ಕಳೆದುಕೊಂಡಿದ್ದಾರೆ. ಫ್ರಭು ಅವರಿಗೆ ಅಪರಿಜಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಲ್ಯಾಬ್ ನಲ್ಲಿ ಮಿಲಿಟರಿ ಸಿಬ್ಬಂದಿಯ ರಕ್ತ ಪರೀಕ್ಷೆ ಮಾಡಬೇಕಿದೆ.
ಅದಕ್ಕೆ ನಿಮ್ಮ ಪೋನ್ ಪೇ ಖಾತೆಗೆ ಹಣ ಜಮಾ ಮಾಡುವುದಾಗಿ ನಂಬಿಸಿ ಅವರ ಕ್ರೆಡಿಟ್ ಕಾರ್ಡ್ ಸಂಖ್ಯೆ ಪಡೆದು ಕೊಂಡಿದ್ದಾನೆ. ಮೋಸದಿಂದ ಅವರ. ಖಾತೆಯಿಂದ ಹಂತ ಹಂತವಾಗಿ 1,30,000 ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment