ಬೆಂಗಳೂರು : ಲಸಿಕೆ ಹಾಕಿಸಿಕೊಳ್ಳದವರಿಗಿಂತ ಲಸಿಕೆಪಡೆದವರಿಗೆ ಕೊರೊನಾ ಸೋಂಕು ಕಾಡುತ್ತಿರುವುದು ಬಿಬಿಎಂಪಿ ವರದಿಯಲ್ಲಿ ಬಹಿರಂಗಗೊAಡಿದೆ. ಅದರಲ್ಲೂ ಈಗಾಗಲೆ ಎಡರು ಡೋಸ್ ಲಸಿಕೆ ಹಾಕಿಸಿ ಕೊಂಡವರನ್ನೇ ಕೊರೊನಾ ಕಾಡುತ್ತಿರುವುದು ಸಾಬೀತಾಗಿದೆ. ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ 505 ಮಂದಿ ಅಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
505 ಮಂದಿಯಲ್ಲಿ 276 ಮಂದಿ ಎರಡು ಡೋಸ್ ಪಡೆದವರೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಕೇವಲ 45 ಮಂದಿ ಸಿಂಗಲ್ ಡೋಸ್ ಹಾಕಿಸಿಕೊಂಡಿದ್ದರೂ ಸೋಂಕು ಕಾಣಿಸಿಕೊಂಡಿದ್ದಾರೆ, 184 ಮಂದಿ ಮಾತ್ರ ಇದುವರೆಗೂ ಲಸಿಕೆಯನ್ನೇ ಹಾಕಿಕೊಂಡಿಲ್ಲ. ಲಸಿಕೆ ಹಾಕಿಸಿಕೊಂಡ ತಕ್ಷಣ ಕೊರೊನಾ ಸೋಂಕು ಬರಲ್ಲ ಅನ್ನೋದಕ್ಕೆ ಗ್ಯಾರಂಟಿ ಇಲ್ಲ.
ಆದರೆ, ಸೋಂಕು ಉಲ್ಬಣಗೊಳ್ಳವುದನ್ನು ತಪ್ಪಿಸುವಲ್ಲಿ ಲಸಿಕೆ ಪ್ರಮಖ ಪಾತ್ರ ನಿರ್ವಹಿಸುತ್ತಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸೋಂಕು ಕಾಣಿಸಿಕೊಂಡು ಐಸಿಯುಸೇರುತ್ತಿರುವ ಸೋಂಕಿತರು ಇತರೆ ರೋಗಲಕ್ಷಣಗಳಿಂದ ನರಳುತ್ತಿರುವವರೇ ಹೆಚ್ಚು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಕಳೆದ ವಾರ ಇದ್ದ ಕೊರೊನಾ ಸಾವಿನ ಪ್ರಮಾಣ 0.03 ರಿಂದ 0.06 ಗೆ ಏರಿಕೆಯಾಗಿರುವುದು ಸ್ವಲ್ಪ ಆತಂಕ ಸೃಷ್ಟಿಸಿದೆ.
Leave a Comment