ಬೆAಗಳೂರು : ಚಾಲುಕ್ಯರ ಸಾಮ್ರಾಜ್ಯವಾಗಿದ್ದ ಬಾದಾಮಿ ಮೂಲಭೂತ ಸೌಕರ್ಯ ಅಭಿವೃದ್ಧಿ ವಿಷಯಗಳಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಕ್ಷೇತ್ರದ ಶಾಸಕರೂ ಆಗಿರುವ ಅವರ ಪ್ರಯತ್ನದ ಫಲವಗಿ ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿಗೆ 265 ಕೋಟಿ ರೂ.ಗಳ ಯೋಜನೆ ಮಂಜೂರಾಗಿದೆ. ಯೋಜನೆ ಸಂಬAಧ ಕೇಂದ್ರ ಭೂಸಾರಿಗೆ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದು ಮಾಡಿದ್ದ ಮನವಿ ಮೇರೆಗೆ ಹಣ ಮಂಜೂರಾಗಿದೆ.
ವಿಶ್ವಖ್ಯಾತ ಪ್ರವಾಸಿ ತಾಣಗಳಾದ ಬಾದಾಮಿ, ಪಟ್ಟದಕಲ್ಲು ಐಹೊಳೆಗೆ ಉತ್ತಮವಾದ ರಸ್ತೆ ಸೌಲಭ್ಯ ಇಲ್ಲದೇ ಸಮಸ್ಯೆಯಾಗಿತ್ತು. ಪಟ್ಟದಕಲ್ಲು, ಶಿರೂರು, ಗದ್ದನಕೇರಿ ಕ್ರಾಸ್ ವರೆಗಿನ ರಾಷ್ಟಿçÃಯ ಹೆದ್ದಾರಿ ಅಗಲೀಕರಣ ಮತ್ತು ಉನ್ನತೀಕರಣಕ್ಕೆ 265 ಕೋಟಿ ರೂ.ಗಳ ಯೋಜನೆ ಮಂಜೂರಾಗಿದ್ದು ಕಾಮಗಾರಿಕೆ ಶೀಘ್ರವೇ ಆರಂಭವಾಗಿ ವರ್ಷದೊಳಗೆ ಪೂರ್ಣಗೊಳ್ಳಲಿದೆ.
ಯೋಜನೆಯ ಒಂದನೇ ಪ್ಯಾಕೇಜ್ ನಲ್ಲಿ 24 ಕಿ.ಮೀ ಬಾದಾಮಿಯಲ್ಲಿ ಹಾದು ಹೋಗಲಿದೆ. ಎರಡನೇ ಪ್ಯಾಕೇಜ್ ನಲ್ಲಿ ಶಿರುರೂ ವರೆಗೆ 15. ಕಿಮೀ ರಸ್ತೆ ಅಭಿವೃದ್ಧಿ ಆಗಲಿದೆ ಎಂದೂ ಸಿದ್ಧರಾಮಯ್ಯ ತಿಳಿಸಿದ್ದಾರೆ.
Leave a Comment