ಹೊನ್ನಾವರ : ಕಾಸರಕೋಡ್ ಟೊಂಕ ಕಡಲತೀರದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಸ್ಥಳೀಯರು ಬ್ಲೂಫ್ಲ್ಯಾಗ್ ಅಂತಾರಾಷ್ಟಿçÃಯ ಸಮಿತಿಗೆ ಮನವಿ ಮಾಡಿದ್ದಾರೆ.

ಜಿಲ್ಲಾ ಆಡಳಿತದ ಉಸ್ತುವಾರಿಯಲ್ಲಿ ನಡೆಯುತ್ತಿರುವ ಖಾಸಗಿ ಬಂದರಿನ ರಸ್ತೆ ಕಾಮಗಾರಿಯಿಂದ ಕಾಸರಕೋಡ ಕಡಲ ತೀರದ ಬ್ಲೂಫ್ಲ್ಯಾಗ್ ಗರಿಮೆಗೂ ಆತಂಕ ಎದುರಾಗಿದೆ.
ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಬಂದರಿನ ರಸ್ತೆ ಕಾಮಗಾರಿ ಮತ್ತು ಮುಂದೆ ನಿರ್ಮಾಣಗೊಳ್ಳಲಿರುವ ರೇಲ್ವೆ ಮಾರ್ಗವು ಬ್ಲೂಫ್ಲ್ಯಾಗ್ ಕಡಲತೀರದ ಮೂಲಕವೇ ಸಾಗುತ್ತದೆ. ಇದರಿಂದ ಅಂತಾರಾಷ್ಟಿçÃಯ ಮಟ್ಟದಲ್ಲಿ ಪ್ರತಿಷ್ಠೆ ಪಡೆದುಕೊಂಡಿರುವ ಕಡಲತೀರಕ್ಕೆ ತೊಂದರೆಯಾಗಲಿದೆ.
ಪ್ರತಿಷ್ಠಿತ ಮುನ್ನಣೆಯನ್ನು ದಕ್ಕಿಸಿಕೊಳ್ಳಲು ವಿಧಿಸಲಾಗಿರುವ 33 ಮಾರ್ಗಸೂಚಿಗಳ ಪಾಲನೆ ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಿರುವ ಹಿನ್ನಲೆಯಲ್ಲಿ ಬ್ಲೂಫ್ಲಾö್ಯಗ್ ಸಮಿತಿಯ ಸದಸ್ಯರು ಕಾಸರಕೋಡ ಇಕೋ ಬೀಚ್ ಗೆ ಭೇಟಿ ನೀಡಿ ಪರಿಶೀಲನೆ ನಡಸಲು ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
Leave a Comment