ಹಳಿಯಾಳದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ಹಳಿಯಾಳ ಜೋಯಿಡಾ ವಿಧಾನಸಭೆ ಕ್ಷೇತ್ರದಿಂದ ಯಾರು ಸ್ಪರ್ಧೆಸಬೇಕು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದ್ದು, ಹೈಕಮಾಂಡ್ ನಿರ್ಧಾರವನ್ನು ನಾವೆಲ್ಲರೂ ಪಾಲಿಸಲೇಬೇಕು.

ಕೇವಲ ಅಧಿಕಾರ ಮಾತ್ರ ಬೇಕು ಎಂದರೆ ಸರಿಯಲ್ಲ ಇಲ್ಲಿಯವರೆಗೆ ಸಂಘಟನೆಯನ್ನು ತಳಮಟ್ಟದಿಂದ ಯಾರು ಯಾರು, ಹೇಗೆ ಹೇಗೆ ಮಾಡಿದ್ದಾರೆ ಎಂಬುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಮುಂದಿನ ವಿಧಾನಸಭೆಯಲ್ಲಿ ನಾನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್ನುವುದು ಅಹಂಕಾರ ಆಗುತ್ತದೆ ಆದ್ದರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ನಾನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದು ಅದನ್ನು ಪಾಲಿಸುತ್ತೇನೆ. ಅಧಿಕಾರ ಕ್ಕಿಂತ ಅಭಿವೃದ್ಧಿಯೇ ನನಗೆ ಮುಖ್ಯ . ಇದೇ ಕೈ ಗಳಿಂದ ಹಲವಾರು ಜನರಿಗೆ ಟಿಕೆಟ್ ಕೊಟ್ಟಿದ್ದೇನೆ ತೆಗೆದುಕೊಂಡವರು ಇದನ್ನು ಮರೆತಿದ್ದಾರೆ. ಇರಲಿ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದರು.
Leave a Comment