ಬೆಂಗಳೂರು : ಸ್ನೇಹಿತೆಯ ಪತಿಗೆ ಚಾಕುನಿಂದ ಇರಿದು ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಸ್ನೇಹಿತನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀ ನಗರದ ಚಂದ್ರ (32) ಮತ್ತು ಕಿರಣ್ (34) ಬಂಧಿತರು. ನಾಗಮಂಗಲ ಮೂಲದ ನರಸಿಂಹ ಶೆಟ್ಟಿ (34) ಚಾಕು ಇರಿತಕ್ಕೆ ಒಳಗಾದವರು. ಮಂಡ್ಯ ನಾಗಮಂಗಲ ಮೂಲದ ನರಸಿಂಹ ಶೆಟ್ಟಿ ಊರಿನಲ್ಲಿ ವ್ಯವಸಾಯ ಮಾಡುತ್ತಾನೆ. ಈತನ ಪತ್ನಿ ವರಲಕ್ಷಿö್ಮ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾಳೆ. ಕುತ್ರಿ ಗುಪ್ಪೆಯ ಬಾಡಿಗೆ ಮನೆಯಲ್ಲಿ ನಲೆಸಿದ್ದಳು.
ಈ ವರಲಕ್ಷಿö್ಮಕೆಲಸ ಮಾಡುವ ಆಸ್ಪತ್ರೆಯಲ್ಲಿ ಅರೋಪಿ ಚಂದ್ರು ಸಹೋದರಿಯೂ ಕೆಲಸ ಮಾಡುತ್ತಿದ್ದಳು. ಸಹೋದರಿಯ ಮಾತನಾಡಿಸಲು ಆಗಾಗ ಚಂದ್ರ ಆಸ್ಪತ್ರೆ ಬಳಿ ಹೋಗುತ್ತಿದ್ದಾಗ ವರಲಕ್ಷಿö್ಮ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಸಲುಗೆಯಿಂದ ಇದ್ದರು ಎನ್ನಲಾಗಿದೆ.
ಇತ್ತೀಚೆಗೆ ಚಂದ್ರು ಹೊಸ ದ್ವಿಚಕ್ರ ವಾಹನ ಖರೀದಿಸುವಾಗ ವರಲಕ್ಷಿö್ಮ ಹಣ ನೀಡಿದ್ದಳು. ಈ ವಿಚಾರ ನರಸಿಂಹ ಶೆಟ್ಟಿಗೆ ತಿಳಿದು ಪತ್ನಿ ವರಲಕ್ಷಿö್ಮಗೆ ಬೈದಿದ್ದ. ಅಲ್ಲದೆ, ಅರೋಪಿ ಚಂದ್ರುಗೆ ಹಣ ವಾಪಸ್ ಕೊಟ್ಟು ಪತ್ನಿಯಿಂದ ಅಂತರ ಕಾಯ್ದಿಕೊಳ್ಳುವಂತೆ ತಾಕೀತು ಮಾಡಿದ್ದ. ಅದರೂ ಚಂದ್ರು ಹಣ ಹಿಂದಿರುಗಿಸಿರಲಿಲ್ಲ. ಹೀಗಾಗಿ ನರಸಿಂಹ ಹಾಗೂ ಚಂದ್ರು ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ನರಸಿಂಹ ಶೆಟ್ಟಿ ಭಾನುವಾರ ರಾತ್ರಿ ಪತ್ನಿ ನೀಡಲು ನಾಗಮಂಗಲದಿAದ ಕತ್ರಿ ಗುಪ್ಪೆಗೆ ಬಂದಿದ್ದ ಈ ವಿಚಾರ ತಿಳಿದು ಆರೋಪಿ ಚಂದ್ರು ತನ್ನ ಇಬ್ಬರು ಸಹಚರರಾದ ಕಿರಣ್ ಮತ್ತು ಪ್ರಬೋದ್ ಎಂಬುವವರೊAದಿಗೆ ವರಲಕ್ಷಿö್ಮ ಮನೆಗೆ ನುಗ್ಗಿ ನರಸಿಂಹ ಶೆಟ್ಟಿಯ ಹೊಟ್ಟಗೆ ಚಾಕುನಿಂದ ಇರಿದು ಪರಾರಿಯಾಗಿದ್ದ.
Leave a Comment