ಸಿದ್ದಾಪುರ : ಬೈಕ್ ಚಲಾಯಿಸಿಕೊಂಡು ಬಂದು ರಸ್ತೆ ಕಾಮಗಾರಿಗಾಗಿ ತೆಗೆದಿದ್ದ ಹಳ್ಳಕ್ಕೆ ಬಿದ್ದುಯುವಕ ಮೃತಪಟ್ಟಿರುವ ಘಟನೆ ತಾಲೂಕಿನ ಕೋಲ್ ಸಿರ್ಸಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಬಿದ್ರಕಾನ ಉಪ್ಪಡಿಕೆಯ ಆದಿತ್ಯ ಮಂಜುನಾಥ ಹೆಗಡೆ (31) ಮೃತ ಯುವಕನಗಿದ್ದು ಇವರು ಬಿದ್ರಕಾನ ಹಾಲಿನ ಡೈರಿಯಲ್ಲಿ ವೃತ್ತಿಯಲ್ಲಿದ್ದರು.
ಕೆಲಸ ಮುಗಿದ ನಂತರ ಸಿದ್ದಾಪುರಕ್ಕೆ ಹೋಗಿ ಮನೆಗೆ ಮರಳುತ್ತಿರುವಾಗ ಕೋಲ್ ಸಿರ್ಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ರಸ್ತೆ ಕಾಮಗಾರಿಗೆ ತೆಗೆಯಲಾಗಿದ್ದ ಗುಡಿಂನ ಬಿದ್ದು ಅಪಘಾತವಾದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ತರುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತಾಲೂಕು ಕಾರ್ಯವಾಹ : ದಿವಂಗತ ಆದಿತ್ಯ ಹೆಗಡೆ ಮಿತಭಾಷಿಯಾಗಿ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದು ಆರ್ ಎಸ್ ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡು ತಾಲೂಕು ಕಾರ್ಯವಾಹರಾಗಿ ಕರ್ತವ್ಯದಲ್ಲಿದ್ದರು. ಹಲವು ಸಾರೆ ರಕ್ತದಾನವನ್ನೂ ಮಾಡಿದ್ದರು. ಅವರು ನೇತ್ರದಾನಕ್ಕೂ ನೋಂದಣಿ ಮಾಡಿದ್ದು ಅವರ ಕಣ್ಣುಗಳನ್ನು ವೈದ್ಯರು ಸಂರಕ್ಷಿಸಿದ್ದಾರೆ. ಆದಿತ್ಯ ಹೆಗಡೆ ಅವರ ನಿಧನಕ್ಕೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಪ.ಪಂ. ಸದಸ್ಯೆ ಗುರುರಾಜ ಶಾನಭಾಗ ಇತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Leave a Comment