ಹೊನ್ನಾವರ : ಕಾರು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಈರ್ವರು ಗಂಭಿರ ಗಾಯಗೊಂಡ ಘಟನೆ ತಾಲೂಕಿನ ಕಾಸರಕೋಡ ರೋಷನ್ ಮೊಹಲ್ಲಾ ಕ್ರಾಸ್ ಹತ್ತಿರ ರಾಷ್ಟಿçÃಯ ಹೆದ್ದಾರಿ ೬೬ ರಲ್ಲಿ ನಡೆದಿದೆ.
ಕಾರು ಚಾಲಕ, ಬೈಂದೂರಿನ ಗಜಾನನ ಜೋಷಿ ಎನ್ನುವವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ತನ್ನ ಎದುರು ಚಲಾಯಿಸುತ್ತಿದ್ದ ಬೈಕ್ ಗೆ ಗುದ್ದಿದ್ದಾನೆ.
ಅಪಘಾತದಲ್ಲಿ ಬೈಕ್ ಸವಾರ, ತಲೂಕಿನ ಕಾಸಕೋಡ ಟೊಂಕಾ ಮೂಲದ ನಾರಾಯಣ ತಾಂಡೇಲ, ಹಿಂಬದಿ ಸವಾರ ಬುದಾಯಿ ತಾಂಡೇಲ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment