ಹೊನ್ನಾವರ : ತಾಲೂಖಿನ ಶ್ರೀ ವೆಂಕಟ್ರಮಣ ದೇವಾಲಯ ಬಾಳೆಗದ್ದೆಯ ವಾರ್ಷಿಕ ವರ್ಧಂತಿ ಉತ್ಸವ ಫೆ. 14 ರಂದು ಮಂಜುಗುಣಿಯ ವೆ.ಮೂ.ಪುಟ್ಟ ಭಟ್ಟ ಅಣ್ಣಯ್ಯ ಭಟ್ ಇವರ ಧಾರ್ಮಿಕ ಅಚಾರ್ಯತ್ವದಲ್ಲಿ ನಡೆಯಲಿದೆ.
13 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊAಡು, 14 ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಕೋವಿಡ್ ನಿಯಮಾನುಸಾರವಾಗಿ ನಡೆಯಲಿದೆ ಎಂದು ಆಡಳಿತ ಮಂಡಳೀಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment