ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಳಿಯಾಳ ಇವರ ವತಿಯಿಂದ 30 ದಿನಗಳ ಹೌಸ್ ವಾಯರಿಂಗ್ ಮತ್ತು ವಿದ್ಯತ್ ಉಪಕರಣಗಳ ದುರಸ್ತಿ ಮಾಡುವ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗುತಿದೆ.
ತರಬೇತಿಯನ್ನು ಊಟ ವಸತಿಯೊಂದಿಗೆ ನೀಡಲಾಗುವುದು. 18 ರಿಂದ 45 ರ ವರ್ಷದೊಳಗಿನ ಆಸಕ್ತ ಯುವಕರು/ಯುವತಿಯರು ಫೆ. 15 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ತರಬೇತಿಯಲ್ಲಿ ಕೌಶಲ್ಯ. ಸಾಫ್ಟ್ ಸ್ಕೀಲ್ಸ್ ಯೋಗ ತರಬೇತಿ ಹಾಗೂ ಬ್ಯಾಂಕಿAಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಕುರಿತು ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯನ್ನು ಅಥವಾ ದೂರವಾಣಿ ಸಂಖ್ಯೆ : 9483485489, 9482188780, 08284 – 295307, 220807, 9743321062 ಗೆ ಸಂಪರ್ಕಿಸಬಹುದೆAದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ನಿರ್ದೇಶಕ ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment