ಕುಮಟಾ: ಪಟ್ಟಣದ ರಥ ಬೀದಿಯಲ್ಲಿ ನೆಲೆಸಿರುವ ಶ್ರೀ ಲಕ್ಷಿö್ಮ ವೆಂಕಟರಮಣ ದೇವರ ಮಹಾ ರಥೋತ್ಸವ ಫೆ. 8 ರಂದು ಸರಳವಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ವಾಸುದೇವ ಪ್ರಭು ತಿಳಿಸಿದರು. ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ದೇವರ ಅನುಗ್ರಹ, ನಮ್ಮ ಗುರುಗಳ ಆಶೀರ್ವಾದ ಮತ್ತು ಭಕ್ತರ ಸಹಕಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷಿö್ಮ ವೆಂಕಟರಮಣ ದೇವರು ಮಹಾ ರಥೋತ್ಸವ ಫೆ. 8 ರಂದು ನಡೆಯಲಿದೆ.
ಜಾತ್ರೆಯ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದ್ದೇವೆ. ಜಾತ್ರೆಯ ಧಾರ್ಮೀಕ ವಿಧಿವಿಧಾನಗಳು ಈಗಾಗಲೇ ಆರಂಭಗೊAಡು, ಫೆ. 10ರ ವರೆಗೆ ನಡೆಯಲಿದೆ. ಫೆ. 8 ಕ್ಕೆ ಮಹಾರಥೋತ್ಸವ ಪತ್ತು ಫೆ. 10 ರಂದು ಗುರುಗಳ ಪುಷ್ಪ ರಥೋತ್ಸವ ನಡೆಯಲಿದೆ. ಕೊವಿಡ್ ಸಾಂಕ್ರಾಮಿಕ ರೋಗದ ಕಾರಣ ಕುಮಟಾ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುವುದು, ಕೊವಿಡ್ ಸುರಕ್ಷತಾ ನಿಯಮಾವಳಿಗಳಾದ ಮಾಸ್ಕ್ ಧರಿಸುವುದು ಮತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುವುದು. ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳ್ಳುವಂತೆ ಕುಮಟಾ ಜನತೆ ಸಹಕಾರ ನೀಡಬೇಕೆಂದು ವಿನಂತಿಸಿದರು.
ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಪ್ರತಿಕ್ರಿಯಿಸಿ, ಕುಮಟಾ ಜಾತ್ರೆಯನ್ನು ಕೊವಿಡ್ ನಿಯಮಾವಳಿಗಳ ಪ್ರಕಾರ ಸರಳವಾಗಿ ನಡೆಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸಿದ್ದೇವೆ. ಅವರು ಕೂಡ ಒಪ್ಪಿಕೊಂಡಿದ್ದಾರೆ. ಇನ್ನೂ ಜಾತ್ರೆ ಅಂಗಡಿಗೆ ನಿರ್ಬಂಧ ವಿಧಿಸಲಾಗಿದ್ದು, ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಪುರಸಬೇ ಮತ್ತು ಪೊಲೀಸ್ ಇಲಾಖೆಯಿಂದ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Leave a Comment