ದಾಂಡೇಲಿ : ಕೈ ಕಾಲು ತೊಳೆಯಲೆಂದು ಕಾಳಿ ನದಿಗಳಿದಿದ್ದ ಯುವಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ಸೋಮವಾರ ಸಂಜೆ ಇಲ್ಲಿನ ಪಟೇಲನಗರದಲ್ಲಿ ನಡೆದಿದೆ.
ಸ್ಥಳೀಯ ಪಟೇಲನಗರದ ನಿವಾಸಿ ಕೊಲಿ ಕಾರ್ಮಿಕನಾಗಿರುವ 22 ವರ್ಷ ವಯಸ್ಸಿನ ಅರ್ಷದ್ ಖಾನ್ ರಾಯಚೂರಕರ ಎಂಬಾತನು ಕೈ ಕಾಲು ತೊಳೆಯಲೆಂದು ಪಟೇಲನಗರದಲ್ಲಿರುವ ಕಾಳಿ ನದಿಗಿಳಿದಿದ್ದ ಸಂದರ್ಭದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಿದೆ.

ಈ ಸುದ್ದಿ ನಗರದೆಲ್ಲೆಡೆ ಮಿಂಚಿನAತೆ ಹರಿದಾಡಿದೆ. ಇತ್ತ ಡಿವೈಎಸ್ಟಿ ಗಣೇಶ್ ಕೆ. ಎಲ್. ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಾಯಕ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಎಸ್. ಎಸ್. ನಿಂಗಾಣಿಯವರ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನುರಿತ ಈಜುಗಾರರ ತಂಡವನ್ನೊಳಗೊAಡAತೆ ರ‍್ಯಾಪ್ಬ್ ಗಳ ಮೂಲಕ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾವಣೆಯಾಗಿದ್ದಾರೆ. ಕಳೆದ ಎರಡುವರೆ ತಿಂಗಳ ಹಿಂದೆ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿ ಬಾಲಕನನ್ನು ಮೊಸಳೆ ಬಲಿ ಪಡೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Leave a Comment