ದಾಂಡೇಲಿ : ಪಟೇಲನಗರದಲ್ಲಿ ನೀರು ಕುಡಿಯಲು ಬಂದಿದ್ದ ಜಿಂಕೆಯ ಮೇಲೆ ಹಳೆದಾಂಡೇಲಿಯ ಕಾಳಿ ನದಿ ದಂಡೆಯಲ್ಲಿ ಆಕಳೊಂದರ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ನಡೆದಿದೆ.
ನೀರಿನ ದಾಹ ತೀರಿಸಿಕೊಳ್ಳಲೆಂದು ಪಟೇಲನಗರದಲ್ಲಿ ನದಿಗಿಳಿದಿದ್ದ ಜಿಂಕೆಯನ್ನು ಮೊಸಳೆಯೊಂದು ಅಟ್ಟಾಡಿಸಿ ಹಿಡಿದು ಕೊಂಡು ಹೋಗಿದೆ. ಈ ಸಂದರ್ಭದಲ್ಲಿ ನದಿಯ ಒಂದು ಬದಿಯಲ್ಲಿ ಸ್ಥಳೀಯರು ಎಷ್ಟೇ ಕೂಗಾಡಿದರೂ. ಅರ್ಭಟಿಸಿದರೂ ಯಾವುದಕ್ಕೂ ಅಂಜದೆ ಮೊಸಳೆ ಜಿಂಕೆಯನ್ನು ಹೊತ್ತುಕೊಂಡು ಹೋಗಿದೆ.
ಇನ್ನು ಹಳೆದಾಂಡೇಲಿಯಲ್ಲಿ ನೀರು ಕುಡಿಯುತ್ತಿರುವಾಗ ಆಕಳ ಮೇಲೆ ಒಮ್ಮಲೆ ದಾಳಿ ನಡೆಸಿದ ಮೊಸಳೆ, ಆಕಳನ್ನು ಎಳೆದೊಯ್ದಿದೆ.
Leave a Comment