ಹೊನ್ನಾವರ : ತಾಲೂಕಿನ ಮಂಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಐಆರ್ ಬಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಇದರಿಂದ ನಿರಂತರವಾಗಿ ಅಫಘಾತ ನಡೆಯುತ್ತಿದೆ. ಇತ್ತೀಚಿನ ದಿನದಲ್ಲಿ ಇದರಿಂದ ಸಾವು ಸಂಭವಿಸುತ್ತದೆ. ಐಆರ್ ಬಿ ಕಂಪನಿಯವರ ಅಸಮರ್ಪಕ ಕಾಮಗಾರಿಯೇ ಕಾರಣವಾಗಿದೆ ಎಂದು ಮಂಕಿ ಭಾಗದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಮಂಕಿಯ ಅಂನತವಾಡಿಯಿAದ ಪಾರಂಭಿಸಿ ಶ್ರೀ ಕ್ಷೇತ್ರ ಇಡಗುಂಜಿಗೆ ಪ್ರಯಾಣಿಸುವ ಪ್ರವೇಶ ದ್ವಾರದವರೆಗಿನ ಸುಮಾರು 10.ಕಿ.ಮೀ. ವ್ಯಾಪ್ತಿ ಹೊಂದಿದೆ. ಈ ಭಾಗದಲ್ಲಿ ಹಲವು ಮಜರೆಗಳಲ್ಲಿ ಜನನಿಬಿಡ ಪ್ರವೇಶವಾಗಿದ್ದು ವಾಹನ ಸವಾರರಿಗೆ ಸರಿಯಾದ ಮಾರ್ಗಸೂಚಿ, ದಾರಿದೀಪದ ವ್ಯವಸ್ಥೆ ಇಲ್ಲದೇ ಅಪಘಾತ ಸಂಭವಿಸುತ್ತಿದೆ. ಹೆಸರಿಗಷ್ಟೇ ಹೆದ್ದಾರಿ ಕಾಮಗಾರಿ ನಡೆಸಿಕೊಂಡು ಬಂದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ರೀತಿಯ ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಇಲ್ಲ. ಸರ್ವಿಸ್ ರೋಡ್ ಕಾಮಗಾರಿಗಳು ಸಹ ನಡೆಸಿಲ್ಲ. ಇದರಿಂದ ಈ ಭಾಗದವರಿಗೆ ತೀರಾಸಮಸ್ಯೆ ಉಂಟಾಗಿದೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ತುರ್ತು ಕ್ರಮವಹಿಸಿ ಈ ಎಲ್ಲಾಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಂಬAಧಿಸಿದ ಇಲಾಖೆಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ನಾಗರಾಜ ನಾಯ್ಕಡ ಮನವಿ ಸ್ವೀಕರಿಸಿ ಸಂಬAಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಐಆರ್ ಬಿ ಅಧಿಕಾರಿಗಳು, ಪಿಎಸ್ ಐ ಮಂಕಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
Leave a Comment