ಹುಬ್ಬಳ್ಳಿ : ಕ್ರೆಡಿಟ್ ಕಾರ್ಡ್ ಖರೀದಿ ಮೊತ್ತದ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ನಗರದ ವ್ಯಾಪಾರಸ್ಥನಿಗೆ 3.64 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ವ್ಯಾಪಾರಸ್ಥ ಸೀತಾರಾಮ ಅನಂತಶೆಟ್ಟಿ ವಂಚನೆಗೊಳಗಾದವರು.
ದೂರುದಾರರು ಮನೆಯಲ್ಲಿದ್ದಾಗ ಮೊಬೈಲ್ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ತಾನು ಕ್ರೆಡಿಟ್ ಕಾರ್ಡ್ ಕಂಪನಿಯವನೆAದು ಪರಿಚಯಿಸಿಕೊಂಡಿದ್ದಾನೆ. ನಂತರ ಕ್ರೆಡಿಟ್ ಕಾರ್ಡ್ ಖರೀದಿ ಲಿಮಿಟ್ ಹೆಚ್ಚು ಮಾಡಿ ಕೊಡುವುದಾಗಿ ಹೇಳಿ, ದೂರುದಾರರ ಕ್ರೆಡಿಟ್ ಕಾರ್ಡ್ ನಂಬರ್ ಮಾಹಿತಿ ಹಾಗೂ ಎರಡು ಓಟಿಪಿಗಳ ಮಾಹಿತಿ ಪಡೆದುಕೊಂಡು 1.28 ಲಕ್ಷ, 1.19 ಲಕ್ಷ ಹಾಗೂ 1.12 ಲಕ್ಷ ರೂಗಳಂತೆ ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ – ಧಾರವಾಡ ಸೈಬರ್ ಕ್ರೆöÊಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Leave a Comment