ನವದೆಹಲಿ : ದೇಶದ ಭದ್ರತೆಗೆ ಅಪಾಯ ತಂದೊಡ್ಡುವ ಅನುಮಾನವಿರುವ 54 ಚೀನಾ ಆ್ಯಫ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಈ ಹಿಂದೆಯೂ ಇದೇ ಕಾರಣಕ್ಕೆ 2 ಬಾರಿ ಚೀನಾ ಆ್ಯಫ್ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಈ ಬಾರಿ 54 ಚೀನಿ ಆ್ಯಫ್ಗಳನ್ನು ನಿಷೇಧಿಸಿದೆ. ನಿಷೇಧಿತ ಆ್ಯಫ್ಗಳ ಪಟ್ಟಿಯಲ್ಲಿ ಸ್ವೀಟ್ ಸೆಲ್ಫಿ ಎಚ್ ಡಿ, ಬ್ಯೂಟಿ ಕ್ಯಮರಾ, – ಸೆಲ್ಫಿ ಕ್ಯಾಮರಾ ಈಕ್ವಲೈಕರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಪೋರ್ಸ್ ಎಂಟ್, ವಿವಾ ವಿಡಿಯೋ ಎಡಿಟರ್, ಟೆನ್ಸೆಂಟ್ ಕ್ರೆöÊವರ್, ಒನ್ಮಿಯೊಜಿ ಅರೆವಾ, ಆಪ್ಮಿಯೋ ಚೆಸ್, ಡ್ಯುಯಲ್ ಸ್ಪೇಸ್ ಲೈಟ್ ಸೇರಿದಂತೆ ಒಟ್ಟು 54 ಆ್ಯಫ್ಗಳು ಸೇರಿವೆ.
ಕಳೆದ ವರ್ಷ ಜೂನ್ ನಲ್ಲಿ ಟಿಕ್ಟಾಕ್, ವೀಚಾಟ್ ಮತ್ತು ಹೆಲೋನಂತಹ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ 59 ಆ್ಯಫ್ಗಳನ್ನು ನಿಷೇಧ ವಿಧಿಸಿತ್ತು. ಮೇ 2020 ರಲ್ಲಿ ಜೀನಾ ಗಡಿಯಲ್ಲಿ ಉದ್ವಿಗ್ನತೆ ನಡುವೆ ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು, ಆನಿರ್ದಿಷ್ಟ ಚೀನಿ ಸೈನಿಕರು ಮೃತಪಟ್ಟ ನಂತರ 321 ಚೀನಿ ಆ್ಯಫ್ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
Leave a Comment