
ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ 15 ರಿಂರ 18ವರ್ಷದೊಳಗಿನ ಮಕ್ಕಳಿಗೆ ಎರಡನೇ ಹಂತದ ಕೋವ್ಯಾಕ್ಸಿನ್ ಲಸಿಕೆ ನೀಡಲಾಯಿತು.
ಲಸಿಕೆ ನೀಡಿ ಮಾತನಾಡಿದ ವಜ್ರಳ್ಳಿಯ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಮಂಗಲಾ ಕೊಟರಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಆರೋಗ್ಯದ ಬಗೆಗೆ ಕಾಳಜಿವಹಿಸಬೇಕಿದೆ. ಕರೋನಾ ತಡೆಗಟ್ಟಲು ಈ ಲಸಿಕೆ ನೆರವಾಗಲಿದ್ದು ಮಕ್ಕಳು ಭಯಪಟ್ಟುಕೊಳ್ಳದೇ ಎಲ್ಲರೂ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳು ಸಾಂಕ್ರಾಮಿಕವಾಗಿ ಹರಡುವ ಖಾಯಿಲೆಯ ಬಗೆಗೂ ಎಚ್ಚರವಹಿಸಬೇಕು.ದೇಹದ ಸ್ವಚ್ಚತೆಯ ಕಡೆ ಗಮನಹರಿಸಬೇಕು.ನಿರಂತರ ಓದಿನ ನಡುವೆ ಆಹಾರ,ನಿದ್ರೆಯ ಕೊರತೆಯಾಗದಂತೆ ಎಚ್ಚರವಹಿಸಬೇಕಿದೆ.ಅಲ್ಲದೇ ಆಗಾಗ ಲಘು ವಿಶ್ರಾಂತಿಯೊಂದಿಗೆ ಮತ್ತೆ ಅಭ್ಯಾಸ ದಲ್ಲಿ ತೊಡಗಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಸರ್ವೋದಯ ಪ್ರೌಢಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ಎಸ್ ಟಿ ಬೇವಿನಕಟ್ಟಿ, ಶಿಕ್ಷಕರಾದ ಗಿರೀಶ ಹೆಬ್ಬಾರ, ಸರೋಜಾ ಭಟ್ಟ, ಆಶಾ ಕಾರ್ಯಕರ್ತೆಯರಾದ ಲಲಿತಾ ಸಿದ್ದಿ, ಅಂಬಿಕಾ ಮರಾಠಾ, ಗೀತಾ ಆಚಾರಿ ಉಪಸ್ಥಿತರಿದ್ದರು.
Leave a Comment