ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ದಾಂಡೇಲಿ ಇವರ ವತಿಯಿಂದ 30 ದಿನಗಳ ಕಾಲಾವಧಿಯ ಜೆಸಿಬಿ ಚಾಲನಾ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.
ತರಬೇತಿಯನ್ನು ಊಟ ವಸತಿಯೊಂದಿಗೆ ನೀಡಲಾಗುವುದು. 18 ರಿಂದ 45 ವರ್ಷದೊಳಗಿನ ಎಸ್.ಎಸ್.ಎಲ್.ಸಿ ತೆರ್ಗೆಡೆಯಾದ ಆಸಕ್ತ ಯುವಕರು ತಮ್ಮ ಹೆಸರು, ಪೂರ್ಣ ಪೊಸ್ಟಲ್ ವಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡಿತ್ತಿರುವ ಕೆಲಸ ವಿವರಗಳೊಂದಿಗೆ ಅರ್ಜಿಯನ್ನು ಫೆಬ್ರವರಿ 20 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ವಿಸ್ತರಣಾ ಕೇಂದ್ರ ಹಸನಮಾಳ ದಾಂಡೇಲಿ 581325 ವಿಳಾಸಕ್ಕೆ ಕಳುಹಿಸುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08284 – 298547, 9449782425, 8050741744ಗೆ ಸಂಪರ್ಕಿಸಬಹುದಾಗಿದೆ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ವಿಸ್ತರಣಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment