ಒಂದು ವರ್ಷದ ಹೆಣ್ಣು ಮಗಳನ್ನು ಮಾರಿದ್ದ ತಾಯಿ ಸೇರಿದಂತೆ 9 ಮಂದಿಯನ್ನು ತಮಿಳನಾಡಿನ ವಿರುದ್ನಗರ ಜಿಲ್ಲೆಯ ಸುಲಕ್ಕರೈ ಪೊಲೀಸರು ಬಂಧಿಸಿ, ರಕ್ಷಿಸಿದ್ದಾರೆ.
ಸುಲಕ್ಕರೈ ಪ್ರದೇಶದ ಕಲೈಸೆಲ್ವಿ 2.50 ಲಕ್ಷ ರೂ.ಗಳಿಗೆ ಮದುರೈ ನಗರದ ದಂಪತಿಗೆ ಮಗಳನ್ನು ಮಾರಾಟ ಮಾಡಿದ್ದಳು. ವಿರುದ್ ನಗರದ ಗ್ರಾಮಾಧಿಕಾರಿ ಈ ಕುರಿತು ಸುಲಕ್ಕರೈ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೊದಲ ಪತಿಯನ್ನು ಕಳೆದುಕೊಂಡಿದ್ದ ಕಲೈಸೆಲ್ವಿ 2 ನೇ ಮದುವೆಯಾಗಿದ್ದಳು. ಮೊದಲ ಪತಿಗೆ ಜನಸಿದ್ದ ಮಗಳನ್ನು ತಂದೆ ಮತ್ತು ಮಧ್ಯವರ್ತಿಗಳ ಸಹಾಯದಿಂದ ಮಾರಿದ್ದಳು.
Leave a Comment