ಭಟ್ಕಳ: ಮಹಿಳೆಯೊರ್ವರ ಹೊಟ್ಟೆಯಲ್ಲಿದ್ದ ಸುಮಾರು 5 ಕೆಜಿ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದಿದ್ದು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಯಲ್ಲಿ ನಡೆದಿದೆ.
ತಾಲೂಕಿನ ತೆರ್ನಮಕ್ಕಿ ನಿವಾಸಿ 50 ವರ್ಷದ ಮಹಿಳೆಯೊರ್ವರು ಕಳೆದ 3 ದಿನಗಳ ಹಿಂದೆ ತೀವ್ರ ಹೊಟ್ಟೆನೋವಿನ ಹಿನ್ನೆಲೆಯಲ್ಲಿ
ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಗೆ ಬಂದಿದ್ದು. ಅವರನ್ನು ಸ್ತ್ರೀ ರೋಗ ತಜ್ಞರಾದ ಡಾ. ಬಾಲಚಂದ್ರ ಮೇಸ್ತ ಸ್ಕ್ಯಾನಿಂಗ್ ಮೂಲಕ ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದ ಗಡ್ಡೆ ಇರುವುದು ತಿಳಿದು ಬಂದಿದೆ. ನಂತರ ಈ ಬಗ್ಗೆ ಮಹಿಳೆಯ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿರುವ 5 ಕೆಜಿ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡ ಹೊರತೆಗೆದಿದ್ದಾರೆ.ಚಿಕಿತ್ಸೆಯ ಬಳಿಕ ಮಹಿಳೆ ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ
ಈ ವೇಳೆ ಡಾ.ಹೇಮಾವತಿ ಹೇಬ್ಳೆ ಅರವಳಿಕೆ ನೀಡಿ ಶಸ್ತ್ರ ಚಿಕಿತ್ಸೆ ಮಾಡಲು ಸಹಕರಿಸಿದ್ದಾರೆ.
ಭಟ್ಕಳ ಸುದ್ದಿಗಾಗಿ ಈ ಗ್ರುಪ್ ಸೇರಿ ;
ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/GtLqeUMgaXDGRtGRyC9KnP
Leave a Comment