ಭಟ್ಕಳ : ಸೈಕಲ್ಲಿಗೆ ಕಾರೊಂದು ಡಿಕ್ಕಿಯಾಗಿ ಸೈಕಲ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಕುಂಬಾರಕೇರಿ ಕ್ರಾಸ್ ಹತ್ತಿರ ನಡೆದಿದೆ.
ಗಾಯಗೊಂಡಿರುವವನನ್ನು ಕಾಯ್ಕಿಣಿ ಕುಂಬಾರಕೇರಿಯ ಮಾದೇವ ತಂದೆ ಸುಬ್ಬಾ ನಾಯ್ಕ ಎಂದು ಗುರುತಿಸಲಾಗಿದೆ. ಈತನು ತನ್ನ ಸೈಕಲ್ ಮೇಲೆ ಬಸ್ತಿ ಕಡೆಯಿಂದ ಗಮ್ಮನಹಕ್ಲ ಕಡೆಗೆ ಬಂದು ಕುಂಬಾರಕೇರಿ ಕ್ರಾಸ್ ಹತ್ತಿರ ಹೆದ್ದಾರಿ ದಾಟುತ್ತಿರುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾಗಿದ್ದು ಗಂಭಿರವಾಗಿ ಗಾಯಗೊಂಡಿದ್ದಾರೆ ಎಂದು ಕಾಯ್ಕಿಣಿಯ ದುರ್ಗೇಶ ದೇವಾಡಿಗ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿಕೊಂಡ ಮುಡೇಶ್ವೆರ ಠಾಣಾ ಪೊಲೀಸರು ತನೀಖೆ ನಡೆಸಿದ್ದಾರೆ.
Leave a Comment