ಕಾರವಾರ : 2021 – 22ನೇ ಸಾಲಿನ ಡಾ.ಬಿ. ಆರ್. ಅಂಬೇಡ್ಕರ್ ನಿವಾಸ ಯೋಜನೆ (ನ) ಮತ್ತು ವಾಜಪೆಯಿ ನಗರ ವಸತಿ ಯೋಜನೆಯಡಿ ವಸತಿ, ನಿವಾಸ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಡಾ. ಅಂಬೇಡ್ಕರ್ ನಿವಾಸ ಯೋಜನೆಯಡಿ ಪ.ಜಾ, ಹಾಗೂ ಪ.ಪಂ.ರೂ 3.30 ಲಕ್ಷದ ಆರ್ಥಿಕ ನೆರವು ಹಾಗೂ ವಾಜಪೇಯಿ ನಗರ ವಸತಿಯೋಜನೆಯಡಿಯಲ್ಲಿ ಸಾಮಾನ್ಯ ಹಾಗೂ ಅಲ್ಪ ಸಂಖ್ಯಾತ ವರ್ಗದವರಿಗೆ ರೂ. 2.70 ಲಕ್ಷ ಆರ್ಥಿಕ ನೆರವಿನಿಂದ ಮನೆ ನಿರ್ಮಿಸಿಕೊಳ್ಳಲುಸ್ವಂತ ನಿವೇಶನ ಹೊಂದಿದ ವಸತಿ ರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಅಗತ್ಯ ದಖಲೆಗಳೊಂದಿಗೆ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸ ಬಯಸುವವರು ಜಾತಿ ಮತ್ತು ಆದಾಯ ಬ್ಯಾಂಕ್ ಪಾಸ್ ಪುಸ್ತಕ, ಆಧಾರಕಾರ್ಡ್, ಪಡಿತರ ಚೀಟಿ ಚುನಾವನಾ ಗುರುತಿನ ಚೀಟಿ, ಪಹಣಿ ಪತ್ರ, ಛಾಯಾಚಿತ್ರ ಹಾಗೂ ನಮೂನೆ 3 ರೊಂದಿಗೆ ಅರ್ಜಿಯನ್ನು ಅಂಕೋಲಾ ಪುರಸಭೆ ಕಾರ್ಯಾಲಯಕ್ಕೆ ಫೆ. 28 ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಂಕೋಲಾ ಪುರಸಭೆ ಕಾರ್ಯಲಯ ಕಚೇರಿ ಹಾಗೂ ಕಚೇರಿಯ ವೆಬ್ ಸೈಟ್ http://www.ankolatown.mrc.gov.in/ ಅಥವಾ ದೂ.ಸಂ. 08388 – 230268 ಗೆ ಸಂಪರ್ಕಿಸಬಹುದು.
Leave a Comment