ಕಾರವಾರ : ಸಚಿನ್ ಕಾಣಕೋಣಕರ ಎಂಬ 26 ವರ್ಷದ ಯುವಕ ಕಾಣೆಯಾಗಿದ್ದಾನೆ. ಜಿಲ್ಲಾ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ವೃತ್ತಿಯಲ್ಲಿದ್ದ ಈತ ಮಖೇರಿ ಸಾಸನವಾಡಾದ ನಿವಾಸಿಯಾಗಿದ್ದು, ಫೆ. 10 ರಂದು ಬೆಳಗ್ಗೆ 8:45 ಕ್ಕೆ ಕೆಲಸಕ್ಕೆಂದು ಹೋದವನು ಆಸ್ಪತ್ರೆಗೂ ಹೋಗದೇ ಮನೆಗೂ ಹೋಗದೇ ಮೊಬೈಲ್ ಬಂದ್ ಮಾಡಿಕೊಂಡು ಎಲ್ಲಿಯೋ ಹೋಗಿದ್ದಾನೆ ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಲು ಮುಖ ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು, ಕಪ್ಪು ಕೂದಲು ಸುಮಾರು 5 ಅಡಿ, 4 ಅಂಗಲು ಎತ್ತರವಿದ್ದು, ಕೊಂಕಣಿ, ಕನ್ನಡ, ಹಿಂದಿ, ಇಂಗ್ಲೀಷ್ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೆಕ್ಸ್ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿ, ತಿಳಿ ನೀಲಿ ಬಣ್ಣದ ಏರ್ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ.
ಈ ವ್ಯಕ್ತಿಯ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಲ್ಲಿ ಅಥವಾ ಯಾವುದೇ ಮಾಹಿತಿ ಲಭಿಸಿದ್ದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ : 08382 – 222 443, ಮೊಬೈಲ್ ಸಂಖ್ಯೆ 94808 05262 ಹಾಗೂ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ : 08382 – 226 550 ಗೆ ತಿಳಿಸಲು ಕಾರವಾರ ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment