ಶಿರಸಿ : ನಗರದ ಡ್ರೆöÊವರ್ ಕಟ್ಟೆಯ ಬಳಿ ನಿಲ್ಲಿಸಿಟ್ಟ ದ್ವಿಚಕ್ರ ವಾಹನವನ್ನು ಕದ್ದು ಒಯ್ದಿದ್ದ ಪ್ರಕರಣದಲ್ಲಿ ಒಬ್ಬನ್ನು ಬಂಧಿಸುವಲ್ಲಿ ನಗರ ಠಾಣೆಯ ಪೊಲೀಸರು ಯಶ್ವಸಿಯಾಗಿದ್ದಾರೆ.

ಬೈಂದೂರಿನ ಕ್ಯಾದಗಿಯ ರಂಜಿತ ರಾಮಚಂದ್ರ ಪೂಜಾರಿ (19) ಬಂಧಿತ ಆರೋಪಿ, ಡ್ರೆöÊವರ್ ಕಟ್ಟೆಯ ದೇವಾಲಯದ ಬಳಿ ಬೈಕ್ ಮಾಲಕ ನಿಲ್ಲಿಸಿಟ್ಟಿದ್ದ ಹಿರೋ ಹೊಂಡಾ ದ್ವಿಚಕ್ರ ವಾಹನವನ್ನು ಈತ ಲಪಟಾಯಿಸಿಕೊಂಡು ಹೋಗಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿ ಅಂದಾಜು 15 ಸಾವಿರ ರೂ. ಮೌಲ್ಯದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
Leave a Comment